ಗದಗ: ವಿನಯ್ ಕುಲಕರ್ಣಿ ವಿಚಾರದಲ್ಲಿ ನ್ಯಾಯಸಮ್ಮತ ವಿಚಾರಣೆ ನಡೆಯಲಿ. ರಾಜಕೀಯ ಹಸ್ತಕ್ಷೇಪ ಬೇಡ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಪೀಠಾಧಿಪತಿ ಜಯಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ತೋಂಟದಾರ್ಯ ಮಠದಲ್ಲಿ ನಡೆದ ಸ್ವಾಮೀಜಿಗಳ ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ನಮಗೆ ಗದಗಿನ ಹಿರಿಯ ಪೂಜ್ಯ ತೋಂಟದಾರ್ಯ ಸಿದ್ದರಾಮ ಶ್ರೀಗಳ ಮಾರ್ಗದರ್ಶನ ಬೇಕಿದೆ. ತೋಂಟದಾರ್ಯ ಶ್ರೀಗಳು ನಮಗೆ ಮಾರ್ಗದರ್ಶನ ಮಾಡಿದ್ದಾರೆ. ನಾವು ಯಾವುದೇ ಸಭೆ ನಡೆಸಿಲ್ಲಾ, ಭಕ್ತರ ಒತ್ತಾಯದ ಮೇರಿಗೆ ಹೇಳಿಕೆ ನೀಡುತ್ತಿದ್ದೇವೆ ಅಷ್ಟೆ. ವಿನಯ್ ಕುಲಕರ್ಣಿ ವಿಚಾರದಲ್ಲಿ ನ್ಯಾಯಸಮ್ಮತ ವಿಚಾರಣೆ ನಡೆಯಲಿ. ರಾಜಕೀಯ ಹಸ್ತಕ್ಷೇಪ ಬೇಡ ಎಂದು ಎಂದರು.

ಈ ಹಿಂದೆ ನಡೆದ ಲಿಂಗಾಯತ ಧರ್ಮದ ಹೋರಾಟದಲ್ಲಿ ಲಿಂಗಾಯತ ಯುವಕರಲ್ಲಿ ಉತ್ಸಾಹ ತುಂಬಿದ್ದು ಸುಳ್ಳಲ್ಲ. ಕೊಲೆ ಪ್ರಕರಣದ ಕುರಿತು ತನಿಖೆಗೆ ಯಾರದ್ದು ಆಕ್ಷೇಪವಿಲ್ಲ. ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ಅಪಾರ ಗೌರವ ಇದೆ. ಆದರೆ ತನಿಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು. ಪ್ರಕರಣ ನ್ಯಾಯಾಲಯದಲ್ಲಿದೆ. ಹಾಗಾಗಿ ಈ ಕುರಿತು ನಾವು ಹೆಚ್ಚಿಗೆ ಹೇಳುವುದಿಲ್ಲ. ಜಿಲ್ಲಾ ಪಂಚಾಯತ್ ಸದಸ್ಯನ ಹತ್ಯೆ ಪ್ರಕರಣದ ಕುರಿತು ನಾನು ಏನು ಹೇಳುವುದಿಲ್ಲ ಎಂದರು.