ETV Bharat / state

ಗದಗ; ಮತ್ತೋರ್ವ ಕೊರೊನಾ ಸೋಂಕಿತ ವ್ಯಕ್ತಿ ಸಾವು

ಗದಗ ತಾಲೂಕಿನ ಸೀತಾಲಹರಿ ಗ್ರಾಮದ 52 ವರ್ಷದ ಪುರುಷ ಸಾವನ್ನಪಿರೋದಾಗಿ ಗದಗ ಡಿಸಿ ಸುಂದರೇಶಬಾಬು.ಎಂ ತಿಳಿಸಿದ್ದಾರೆ.

gadag
gadag
author img

By

Published : Jul 9, 2020, 11:42 PM IST

ಗದಗ: ಜಿಲ್ಲೆಯಲ್ಲಿ ಮತ್ತೊಬ್ಬ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಮೂಲಕ ಕೊರೊನಾದಿಂದ ಜಿಲ್ಲೆಯಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಐದಕ್ಕೇರಿದೆ.

gadag
ಗದಗ ಡಿಸಿ ಸುಂದರೇಶಬಾಬು.ಎಂ

ಗದಗ ತಾಲೂಕಿನ ಸೀತಾಲಹರಿ ಗ್ರಾಮದ 52 ವರ್ಷದ ಪುರುಷ ಸಾವನ್ನಪಿರುವುದಾಗಿ ಗದಗ ಡಿಸಿ ಸುಂದರೇಶಬಾಬು .ಎಂ ತಿಳಿಸಿದ್ದಾರೆ. ಇದೇ ತಿಂಗಳು ಜುಲೈ 8 ರಂದು ಕೆಮ್ಮು, ನೆಗಡಿ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಆಗಮಿಸಿ ತಮ್ಮ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಒದಗಿಸಿ ಮರಳಿ ಮನೆಗೆ ತೆರಳಿದ್ದರು.

ಇಂದು ಮುಂಜಾನೆ ಎದೆ ಉರಿತದಿಂದಾಗಿ ಮನೆಯಲ್ಲಿಯೇ ಮೃತಪಟ್ಟಿರುವುದಾಗಿ ಸ್ಥಳೀಯ ವಿಚಾರಣೆಯಿಂದ ತಿಳಿದು ಬಂದಿದೆ. ಇವರ ಗಂಟಲು ದ್ರವದ ಪರೀಕ್ಷಾ ವರದಿಯು ಕೋವಿಡ್-19 ಸೋಂಕು ಪಾಸಿಟಿವ್ ಆಗಿದ್ದು, ಮೃತರ ಅಂತ್ಯಕ್ರಿಯೆಯನ್ನು ಕೋವಿಡ್-19ರ ಮಾರ್ಗಸೂಚಿಗಳನ್ವಯ ನೆರವೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.