ETV Bharat / state

ಸೋಂಕಿಗೆ ಬಲಿಯಾದ ಮಹಿಳೆ... ಗದಗದಲ್ಲಿ ಮೃತರ ಸಂಖ್ಯೆ 6ಕ್ಕೇರಿಕೆ! - Gadag latest news

ಬಸವೇಶ್ವರ ನಗರದ ನಿವಾಸಿ 51 ವರ್ಷದ ಮಹಿಳೆಯೋರ್ವರು ಮಹಾಮಾರಿ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 6ಕ್ಕೇರಿದೆ.

DC sundareshababu M
DC sundareshababu M
author img

By

Published : Jul 10, 2020, 11:51 PM IST

ಗದಗ: ಇಂದು ಮತ್ತೋರ್ವ ಮಹಿಳೆ ಕೊರೊನಾ ಸೋಂಕಿನಿಂದ‌ ಮೃತಪಟ್ಟಿದ್ದು, ಮೃತರ ಸಂಖ್ಯೆ ಇದೀಗ 6ಕ್ಕೇರಿದೆ.

ಬಸವೇಶ್ವರ ನಗರದ 51 ವರ್ಷದ ಮಹಿಳೆ ಮೃತಳಾಗಿದ್ದು, ಜು.7 ರಂದು ಸಾಯಂಕಾಲ ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಐಸಿಯು ವಿಭಾಗದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಗಂಟಲು ದ್ರವದ ಪರೀಕ್ಷಾ ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ. ಆದರೆ ಇಂದು ಮದ್ಯಾಹ್ನ 12.30ಕ್ಕೆ ಮೃತ ಪಟ್ಟಿದ್ದಾರೆ.

ಮೃತ ಮಹಿಳೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಸುಂದರೇಶಬಾಬು ಎಂ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.