ETV Bharat / state

ಡಾಬಾಗಳ ಮೇಲೆ‌ ಅಧಿಕಾರಿಗಳ ದಾಳಿ: ನಕಲಿ ಮದ್ಯ ವಶ, ಆರೋಪಿಗಳ ಬಂಧನ

ಡಾಬಾಗಳಲ್ಲಿ ನಕಲಿ ಮದ್ಯ ಮಾರಾಟ ಮಾಡುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿರುವ ಜೈ ಮಾತಾ ಡಾಬಾ ಹಾಗೂ ಮುಂಡರಗಿ ಪಟ್ಟಣದಲ್ಲಿರುವ ಹಳ್ಳಿಮನೆ ಡಾಬಾ ಮೇಲೆ ದಾಳಿ ನಡೆಸಲಾಗಿದೆ.

officers raid dhabas counterfeit liquor, arrest of accused
ಡಾಬಾಗಳ ಮೇಲೆ‌ ಅಧಿಕಾರಿಗಳ ದಾಳಿ: ನಕಲಿ ಮದ್ಯ ವಶ, ಆರೋಪಿಗಳ ಬಂಧನ
author img

By

Published : Sep 2, 2020, 2:14 PM IST

Updated : Sep 2, 2020, 2:40 PM IST

ಗದಗ: ಅಬಕಾರಿ ಇಲಾಖೆ ಅಧಿಕಾರಿಗಳು ಡಾಬಾಗಳ ಮೇಲೆ ದಾಳಿ ಮಾಡಿ ಸಾವಿರಾರು ರೂ. ಮೌಲ್ಯದ ನಕಲಿ ಮದ್ಯ ವಶಪಡಿಸಿಕೊಂಡು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಡಾಬಾಗಳ ಮೇಲೆ‌ ಅಧಿಕಾರಿಗಳ ದಾಳಿ: ನಕಲಿ ಮದ್ಯ ವಶ, ಆರೋಪಿಗಳ ಬಂಧನ

ಡಾಬಾಗಳಲ್ಲಿ ನಕಲಿ ಮದ್ಯ ಮಾರಾಟ ಮಾಡುವ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿರುವ ಜೈ ಮಾತಾ ಡಾಬಾ ಹಾಗೂ ಮುಂಡರಗಿ ಪಟ್ಟಣದಲ್ಲಿರುವ ಹಳ್ಳಿಮನೆ ಡಾಬಾ ಮೇಲೆ ದಾಳಿ ಮಾಡಿದ್ದಾರೆ.

ಜಪ್ತಿ ಮಾಡಿರುವ ಒಟ್ಟು 38.16 ಲೀಟರ್​ ನಕಲಿ ಮದ್ಯ ಹಾಗೂ 7.8 ಲೀಟರ್​ ಬಿಯರ್ ವಶಪಡಿಸಿಕೊಂಡು 4 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರತ್ಯೇಕ ಎರಡು ಘಟನೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಇನ್ನು ಇಂಪೀರಿಯಲ್ ಬ್ಲ್ಯೂ ಬ್ರಾಂಡ್ ಹೆಸರಿನಲ್ಲಿ ನಕಲಿ ಮದ್ಯ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಕುರಿತು ಈಟಿವಿ ಭಾರತದ ಜೊತೆಗೆ ಮಾತನಾಡಿದ ಗದಗ ಅಬಕಾರಿ ಡಿಸಿ ಮೋತಿಲಾಲ್, ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ್ದು, ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದೇವೆ. ನಕಲಿ ಮದ್ಯ ಎಲ್ಲಿ ತಯಾರಾಗುತ್ತದೆ, ಎಲ್ಲಿ ಸರಬರಾಜು ಆಗುತ್ತದೆ ಅನ್ನೊದನ್ನು ಆದಷ್ಟು ಬೇಗ ಪತ್ತೆ ಹಚ್ಚುತ್ತೇವೆ ಎಂದರು.

Last Updated : Sep 2, 2020, 2:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.