ಗದಗ : ನಗರದಲ್ಲಿಂದು ಯಾವುದೇ ಕೊರೊನಾ ಪಾಸಿಟಿವ್ ಕೆಸ್ ಧೃಢಪಟ್ಟಿಲ್ಲ, ಆದ್ರೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ್ ಅವರ ಫೇಸ್ಬುಕ್ ಖಾತೆಗೆ ಪಾಸಿಟಿವ್ ಕೇಸ್ ಬಗ್ಗೆ ಟ್ಯಾಗ್ ಮಾಡಿ ಜಿಲ್ಲೆಯ ಜನರಿಗೆ ಭಯ ಉಂಟು ಮಾಡುತ್ತಿದ್ದಾರೆ.
ಇಂದು ಬಿಡುಗಡೆಯಾದ ಕೊರೊನಾ ಕುರಿತು ಬುಲೆಟಿನ್ನಲ್ಲಿ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಕೇಸ್ ದೃಢವಾದ ಮಾಹಿತಿ ಇಲ್ಲಾ, ಗದಗ ಜಿಲ್ಲಾಧಿಕಾರಿ ಕೂಡ ಯಾವುದೇ ಕೇಸ್ ಬಗ್ಗೆ ಧೃಡಪಡಿಸಿಲ್ಲ, ಆದ್ರೆ ಸಚಿವ ಸಿ. ಸಿ. ಪಾಟೀಲ್ ಫೇಸ್ಬುಕ್ ಖಾತೆ ಓಪನ್ ಮಾಡಿದ್ರೆ ಕನಿಷ್ಠ 6 ಜನ ಅಭಿಮಾನಿಗಳು ಅವರ ಖಾತೆಗೆ ಕೊರೊನಾ ಪಾಸಿಟಿವ್ ಅಂತ ಟ್ಯಾಗ್ ಮಾಡಿದ್ದಾರೆ.
ಟ್ಯಾಗ್ ಮಾಡಿರುವ ಪೋಸ್ಟ್ನಲ್ಲಿ ನರಗುಂದ ತಾಲೂಕಿನ ಕಲಕೇರಿ ವ್ಯಕ್ತಿಯೊರ್ವನಿಗೆ ಸೋಂಕು ಪತ್ತೆಯಾಗಿದೆ, ಸಚಿವರು ಹೋಗಿ ಪರಿಶೀಲಿಸಿ ಅಧಿಕಾರಿಗಳಿಗೆ ಕಟ್ಟೆಚ್ಚರ ವಹಿಸಲು ಸೂಚಿಸಿದ್ದಾರೆ ಎಂದು ಬರೆಯಲಾಗಿದೆ.
ಈ ಸಂಬಂಧ ಗದಗ ಡಿಸಿ ಎಂ. ಜಿ. ಹಿರೇಮಠ ಅವರನ್ನು ಕೇಳಿದರೆ ಇಂದು ಯಾವುದೇ ಪಾಸಿಟಿವ್ ಬಂದಿಲ್ಲ ಅಂತಿದ್ದಾರೆ. ಆದ್ರೆ ಸಚಿವರು ಕಲಕೇರಿ ಗ್ರಾಮಕ್ಕೆ ಭೇಟಿ ನೀಡಿರುವ ಫೋಟೋ ಮಾತ್ರ ಅಪ್ಲೋಡ್ ಮಾಡಿದ್ದಾರೆ. ಇದು ಕಲಕೇರಿ ಜನರಿಗೆ ಮಾತ್ರವಲ್ಲ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ.