ಗದಗ: ಜಿಲ್ಲೆಯ ಬೆಣ್ಣೆಹಳ್ಳದ ಪ್ರವಾಹದಲ್ಲಿ ಸಹೋದರರು ಕೊಚ್ಚಿ ಹೋಗಿ ಇಂದಿಗೆ ನಾಲ್ಕು ದಿನಗಳಾಗಿದ್ದು, ಇಂದೂ ಕೂಡ ಯುವಕರ ಶೋಧ ಕಾರ್ಯ ಮುಂದುವರೆದಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಮಾಳವಾಡ ಗ್ರಾಮದ ಬಳಿ ಅಕ್ಟೋಬರ್ 26ರಂದು ಸಹೋದರರಾದ ಕಳಸಪ್ಪ(30) ಹಾಗೂ ಈರಣ್ಣ(15) ನೀರುಪಾಲಾಗಿದ್ರು. ಅಂದಿನಿಂದ NDRF ಹಾಗೂ ಅಗ್ನಿಶಾಮಕ ದಳ ಸೇರಿದಂತೆ ಪೊಲೀಸ್ ತಂಡಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಈವರೆಗೂ ಸಹ ಯುವಕರ ಮೃತದೇಹ ಪತ್ತೆಯಾಗಿಲ್ಲ.
ಸದ್ಯ ಬೆಣ್ಣೆಹಳ್ಳದಲ್ಲಿ ಪ್ರವಾಹ ಸಂಪೂರ್ಣ ಇಳಿದಿದ್ದು, ಎರಡು NDRF ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಇಂದು ಬೆಳಿಗ್ಗೆಯಿಂದಲೇ ಶೋಧ ಕಾರ್ಯ ಮತ್ತೆ ಆರಂಭವಾಗಿದೆ. ಹೊಳೆಆಲೂರ, ಅಮರಗೋಳ, ಹೊಳೆಹಡಗಲಿ ಗ್ರಾಮಗಳ ಬಳಿ ಇರೋ ಮಲಪ್ರಭಾ ನದಿಯಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ನೀರುಪಾಲಾದವರು ನರಗುಂದ ತಾಲೂಕಿನ ಹದ್ಲಿ ಗ್ರಾಮದವರಾಗಿದ್ದು, ಈವರೆಗೂ ಪತ್ತೆಯಾಗಿಲ್ಲ. ಇನ್ನು ಇವರ ಸುಳಿವು ಸಿಗದೆ ಹೆತ್ತವರ ಅಕ್ರಂದನ ಮುಗಿಲು ಮುಟ್ಟಿದೆ. ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.