ಗದಗ: ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಹಾ ಅನ್ಯಾಯ ಮಾಡಿದೆ ಅಂತಾ ಗದಗ ಕಾಂಗ್ರೆಸ್ ಶಾಸಕ ಹೆಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಗದಗನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ದುರ್ದೈವ ಎಂದ್ರೆನೇ ಕೇಂದ್ರ ಸರ್ಕಾರ. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಗದಗದಂತಹ ಸತ್ವ ಭೂಮಿಯ ಮೇಲೆ ನಿಂತು ಚುನಾವಣೆ ಆದ ನಂತರ ಗೋವಾ, ಮಹಾರಾಷ್ಟ್ರ, ಕರ್ನಾಟಕ ಸರ್ಕಾರಗಳನ್ನು ಕರೆದು ಮಹದಾಯಿ ಸಮಸ್ಯೆ ಬಗೆಹರಿಸ್ತೀನಿ ಅಂತ ಪ್ರಧಾನಿ ಮೋದಿ ಹೇಳಿದ್ರು. ಪುನಃ ಮತ್ತೆ ಪ್ರಧಾನಮಂತ್ರಿ ಆದ್ರು. ಇನ್ನೂ ಸಹ ಕರ್ನಾಟಕಕ್ಕೆ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿದ್ರು. ಇತ್ತ ಕರ್ನಾಟಕಕ್ಕೆ ದೊರೆತಿರೋ ಪರಿಸರ ಇಲಾಖೆ ಒಪ್ಪಿಗೆಯನ್ನೂ ಸಹಿತ ಇದೀಗ ಕೇಂದ್ರ ಸರ್ಕಾರ ರದ್ದು ಪಡಿಸಿರೋದು ಯಾವ ನ್ಯಾಯ ಅಂತಾ ಪ್ರಶ್ನೆ ಮಾಡಿದ್ರು. ತೀರ್ಪು ಬಂದು ಒಂದೂವರೆ ವರ್ಷವಾಯಿತು. ಕೆಲಸ ಪ್ರಾರಂಭಿಸಬೇಕಿತ್ತು. ಆದ್ರೆ ಕೆಲಸ ಶುರುವಾಗುವ ಪ್ರಕ್ರಿಯೆ ಆಗಲಿಲ್ಲ. ಗೋವಾದವರ ರಾಜಕೀಯ ಅನುಕೂಲಕ್ಕೋಸ್ಕರ ಈ ರೀತಿ ಮಾಡುವುದು ಕರ್ನಾಟಕಕ್ಕೆ ಮಾಡೋ ಮಹಾ ಅನ್ಯಾಯ ಅಂತಾ ಪ್ರಧಾನಿ ಮೋದಿ ವಿರುದ್ಧ ಗುಡುಗಿದ್ರು.
ಇನ್ನು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಗಡಿ ತಂಟೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪಾಟೀಲ್, ಸಿಎಂ ಠಾಕ್ರೆ ಹೇಳಿಕೆ ಉದ್ಧಟತನದಿಂದ ಕೂಡಿದ್ದು, ಬೆಳಗಾವಿ, ಕಾರವಾರ, ನಿಪ್ಪಾಣಿ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಅಂತ ಹೇಳಿದ್ದಾರೆ. ಇಂತಹ ಹೇಳಿಕೆ ಮೂಲಕ ಉದ್ಧಟತನ ಪ್ರದರ್ಶನ ಮಾಡಿದ್ದಾರೆ ಅಂತ ಕಿಡಿಕಾರಿದ್ರು. ಠಾಕ್ರೆ ಗಡಿ ತಂಟೆ ಮಾಡಿದ್ರೂ ರಾಜ್ಯ ಸರ್ಕಾರ ಬಾಯಿ ಮುಚ್ಕೊಂಡು ತೆಪ್ಪಗೆ ಕುಳಿತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ ಪಾಟೀಲ್, ಮಹಾರಾಷ್ಟ್ರ ಸರ್ಕಾರ ಈಗಾಗಲೇ ಛಗನ್ ಬುಜಬಲ್, ಸಿಂಧೆ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಕಾನೂನು ಹೋರಾಟಕ್ಕೆ ಸಂದೇಶ ನೀಡಿದೆ. ನಮ್ಮ ಸರ್ಕಾರ ಸುಮ್ಮನೆ ಕುಳಿತಿದೆ. ಹೀಗಾಗಿ ಸಿಎಂ ಯಡಿಯೂರಪ್ಪಗೆ ಪತ್ರ ಬರೆದು ಎಚ್ಚರಿಕೆ ನೀಡಿದ್ದೇನೆ. ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಹೇಳಿಕೆ ತೀವ್ರವಾಗಿ ಖಂಡಿಸ್ತೇನೆ ಅಂತಾ ಮಹಾರಷ್ಟ್ರ ಸಿಎಂ ವಿರುದ್ಧ ಕಿಡಿಕಾರಿದ್ರು.