ಗದಗ: ಬಿಹಾರಕ್ಕೆ ತೆರಳುವ 180 ಕಾರ್ಮಿಕರನ್ನು ಮಿನಿ ಬಸ್ ಮೂಲಕ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಕಳುಹಿಸಿಕೊಡಲಾಯಿತು. ಕೆಲವರು ಮುಖಕ್ಕೆ ಮಾಸ್ಕ್ ಧರಿಸಿರಲಿಲ್ಲ. ಅಲ್ಲದೆ ಸಾಮಾಜಿಕ ಅಂತರವೂ ಪಾಲನೆಯಾಗಿಲ್ಲ ಎನ್ನಲಾಗಿದೆ.
ಅಧಿಕಾರಿಗಳೇ ಮುಂದೆ ನಿಂತು ಕುರಿ ಮಂದೆಯಂತೆ ಕಾರ್ಮಿಕರನ್ನು ಮಿನಿ ಬಸ್ಗೆ ತುಂಬಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸೀಟ್ನಲ್ಲಿ ಇಬ್ಬರು, ಮೂವರು ಕಾರ್ಮಿಕರು ಕುಳಿತರೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ ಎನ್ನಲಾಗಿದೆ.