ಗದಗ: ರೋಡ್ ರೋಲರ್ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಏಕಾಏಕಿ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.
ಗದಗನಲ್ಲಿ ದುಡಿಯಲು ಹೋದ ವ್ಯಕ್ತಿ ಶವವಾಗಿ ಪತ್ತೆ ವೆಂಕಟೇಶ ಹುಚ್ಚಪ್ಪ (47) ಮೃತ ಚಾಲಕ. 'ಇದು ಸಹಜವಾದ ಸಾವಲ್ಲ. ಅವನನ್ನು ಕೊಲೆ ಮಾಡಲಾಗಿದೆ' ಎಂದು ಕುಟುಂಬಸ್ಥರು ಆರೋಪಿಸಿ ಗುತ್ತಿಗೆದಾರ ನಿಖಿಲ್ ರೆಡ್ಡಿ ಎಂಬುವವರ ಮನೆ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದರು.
ನಿಖಿಲ್ ರೆಡ್ಡಿ ಎಂಬಾತ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಬಸರಿಗಟ್ಟಿ ತಾಂಡಾದಲ್ಲಿ ರಸ್ತೆ ಕಾಮಗಾರಿಗೆ ನಡೆಸುತ್ತಿದ್ದಾನೆ. ಅಲ್ಲಿನ ಕೆಲಸಕ್ಕೆ ರೋಡ್ ರೋಲರ್ ಚಾಲಕನಾಗಿ ವೆಂಕಟೇಶ್ ಸೇರಿದ್ದ. ಏಕಾಏಕಿ ನಿನ್ನೆ ಮೃತಪಟ್ಟಿದ್ದಾನೆ. ವೆಂಕಟೇಶ್ ತಲೆ ಮತ್ತು ಕೈ ಕಾಲುಗಳ ಮೇಲೆ ಗಾಯದ ಗುರುತುಗಳಿವೆ. ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಪತ್ನಿ ಅನಿತಾ ಆರೋಪಿಸಿದ್ದಾರೆ.
ಗುತ್ತಿಗೆದಾರರ ನಿಖಲ್ ರೆಡ್ಡಿ, ಆತ ಸಾಕಷ್ಟು ಕುಡಿಯುತ್ತಿದ್ದ. ನಿನ್ನೆ ಕೂಡ ಸಾಕಷ್ಟು ಕುಡಿದು ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದಾನೆ. ಗಾಯದಿಂದಾಗಿಯೇ ಆತ ಮೃತಪಟ್ಟಿದ್ದಾನೆ. ಆತನ ಸಾವಿಗೂ ನನಗೂ ಯಾವುದೇ ಸಂಬಂಧವಿಲ್ಲ. ಕಾನೂನು ಪ್ರಕಾರ ತನಿಖೆ ಆಗಲಿ ಎಂದು ಹೇಳಿದ್ದಾರೆ.
ಈ ಕುರಿತು ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.