ETV Bharat / state

ಕೊರೊನಾ ತಂದಿಟ್ಟ ಸಂಕಷ್ಟ.. ಲಾಕ್​ಡೌನ್​ನಿಂದ ಎಲ್ಲಾ ವರ್ಗದವರು ಕಂಗಾಲು - effect

ಮಹಾಮಾರಿ ಕೊರೊನಾ ಇಡೀ ಭೂಮಂಡಲವನ್ನೇ ನಡುಗಿಸುತ್ತಿದೆ. ಮನುಷ್ಯ ಮನುಷ್ಯನನ್ನೇ ದೂರ ತಳ್ಳುವ ಹಾಗೆ ಮಾಡಿದೆ. ಶ್ರೀಮಂತ, ಮಧ್ಯಮವರ್ಗ, ಬಡವ, ಶ್ರಮಿಕ ಅಂತ ಯಾವುದನ್ನೂ ಎಣಿಸದೇ ಅವರ ನೆಮ್ಮದಿಯ ಜೀವನಕ್ಕೆ ಕೊಳ್ಳಿ ಇಟ್ಟಿದೆ. ಮಧ್ಯಮ ವರ್ಗದ ಜನರ ಸಂಕಟಕ್ಕೆ ಪಾರವಿಲ್ಲದಂತಾಗಿದೆ.

lockdown
ಲಾಕ್​ಡೌನ್​ ಎಫೆಕ್ಟ್​
author img

By

Published : Apr 14, 2020, 8:56 PM IST

ಗದಗ: ಇಂತಹ ದಿನ ಬರುತ್ತದೆ ಎಂದು ಯಾರೂ ಕೂಡಾ ಊಹಿಸಿರಲಿಲ್ಲ. ಕೊರೊನಾ ಅಂತಹ ಪರಿಸ್ಥಿತಿಯನ್ನು ಈಗ ತಂದೊಡ್ಡಿದೆ. ಯಾರೊಬ್ಬರೂ ಕೂಡಾ ಮನೆಯಿಂದ ಹೊರಬರದಂತೆ ಸರ್ಕಾರ್ ಲಾಕ್​ಡೌನ್​ ಘೋಷಣೆ ಮಾಡಿರುವ ಕಾರಣದಿಂದ ಬಡವರು ಹಾಗೂ ಮಧ್ಯಮ ವರ್ಗದ ಜನತೆ ತುಂಬಾ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಅಂದಿನ ದಿನದ ಊಟವನ್ನು ಅಂದೇ ಸಂಪಾದಿಸಿಕೊಳ್ಳುತ್ತಿದ್ದ ಈ ವರ್ಗದ ಜನತೆಗೆ ಈಗ ದಿಕ್ಕಿಲ್ಲದಂತಾಗಿದೆ. ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇಲ್ಲಿನ ಜನರಿಗೆ ಒದಗಿ ಬಂದಿದ್ದು ಕಂಗಾಲಾಗಿದ್ದಾರೆ.

ಲಾಕ್​ಡೌನ್​ ಎಫೆಕ್ಟ್​

ಸದ್ಯ ಎದುರಾಗಿರೋ ಆರೋಗ್ಯ ತುರ್ತುಪರಿಸ್ಥಿತಿ ಅದೆಷ್ಟೋ ಜೀವಗಳನ್ನು ಹಸಿವಿ‌ನ ಬೇಗೆಯಿಂದ ಬಳಲುವಂತೆ ಮಾಡಿದೆ. ಕೆಲವರು ಮತ್ತೊಬ್ಬರ ಹತ್ತಿರ ಹೇಳೋಕೂ ಆಗದೇ, ದಾನಿಗಳು ಕೊಡೋ ದೇಣಿಗೆಯತ್ತ ಕೈ ಚಾಚೋಕು ಆಗದೇ ಮಾನಸಿಕವಾಗಿ ನರಕಯಾತನೆ ಅನುಭವಿಸ್ತಿದಾರೆ ಅನುಭವಿಸ್ತಾ ಇದಾರೆ ಅಂತಾನೂ ಕೆಲವರು ಹೇಳೋ ಮಾತು. ಮತ್ತೆ ಕೆಲವರು ಸರ್ಕಾರ ಹಾಗೂ ಸಂಘ, ಸಂಸ್ಥೆಗಳು ಕೊಡೋ ಆಹಾರ, ದವಸ- ಧಾನ್ಯ, ದಿನನಿತ್ಯದ ಅವಶ್ಯಕ‌ ವಸ್ತುಗಳನ್ನು ಒಂದು ಹೊತ್ತಿನ ಹೊಟ್ಟೆ ತುಂಬಿದ್ರೆ ಸಾಕಪ್ಪಾ ಸಾಕು ಅಂತ ಕೊರೊನಾ ಜೊತೆಗೆ ಸೆಣಸಾಟ ನಡೆಸುತ್ತಿದ್ದಾರೆ.

ಒಟ್ಟಾರೆ ಕೊರೊನಾದಿಂದ ನಮ್ಮ ದೇಶದಲ್ಲಿ ಸಾವು- ನೋವುಗಳ ಪ್ರಮಾಣ ಅದೃಷ್ಟವಶಾತ್​ ಕಡಿಮೆ ಎನ್ನಬಹದು. ಆದರೆ ಆತಂಕಕಾರಿ ವಿಚಾರ ಏನಂದ್ರೆ ದಿನೇ ದಿನೆ ಸೋಂಕಿತರ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದೆ. ಏನೇ ಆದರೂ ಕೂಡಾ ಸರ್ಕಾರದ ನಿಯಮಗಳನ್ನು ಪಾಲಿಸಿದ್ರೆ ಮಾತ್ರ ಉಳಿವು ಎಂಬ ನಿರ್ಧಾರಕ್ಕೆ ಜನರು ಬರಬೇಕಿದೆ. ಕೊರೊನಾ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.