ETV Bharat / state

ನರಗುಂದ ಭೂ ಕುಸಿತ ಒಂದು ಯಕ್ಷ ಪ್ರಶ್ನೆಯಾಗಿದೆ: ಸಚಿವ ಸಿ.ಸಿ.ಪಾಟೀಲ

ಬಂಡಾಯದ ನೆಲ ನರಗುಂದದಲ್ಲಿ ಮತ್ತೆ ಮತ್ತೆ ಭೂ ಕುಸಿತ ಆಗ್ತಿರೋದು ನಮಗೆಲ್ಲಾ ದೊಡ್ಡ ಯಕ್ಷ ಪ್ರಶ್ನೆಯಾಗಿದೆ ಎಂದು ಗಣಿ ಮತ್ತು‌ ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.

author img

By

Published : Feb 29, 2020, 9:58 PM IST

landslides in Naragunda
ನರಗುಂದದಲ್ಲಿ ನಿಲ್ಲದ ಭೂಕುಸಿತ..ಸಚಿವರೇ ಕಂಗಾಲು

ನರಗುಂದ/ಗದಗ: ಬಂಡಾಯದ ನೆಲ ನರಗುಂದದಲ್ಲಿ ಮತ್ತೆ ಮತ್ತೆ ಭೂ ಕುಸಿತ ಆಗ್ತಿರೋದು ನಮಗೆಲ್ಲಾ ದೊಡ್ಡ ಯಕ್ಷ ಪ್ರಶ್ನೆಯಾಗಿದೆ ಎಂದು ಗಣಿ ಮತ್ತು‌ ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಗಣಿ ಮತ್ತು‌ ಭೂ ವಿಜ್ಞಾನ ಇಲಾಖೆಯ ಸಚಿವ ಸಿ.ಸಿ.ಪಾಟೀಲ್

ಗದಗನಲ್ಲಿ ಈ ಕುರಿತು ಮಾತನಾಡಿದ ಅವರು, ಈಗಾಗಲೇ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದೆವು. ಆದರೆ ಅವರಿಂದಲೂ ಸಹ ನಿರ್ದಿಷ್ಟವಾಗಿರುವ ಕಾರಣ ಹೇಳೋಕೆ ಆಗ್ತಾ ಇಲ್ಲ. ಅದೆಷ್ಟೋ ಪ್ರಕೃತಿ ಅವಘಡಗಳನ್ನು ಮುಂಚಿತವಾಗಿಯೇ ತಿಳಿಸಿರೋ ಹಿರಿಯ ವಿಜ್ಞಾನಿ ಎಸ್.ಎಚ್.ಎಂ‌.ಪ್ರಕಾಶ ಅವರಿಗೂ ಈ ಸಮಸ್ಯೆ ತಿಳಿಯದಾಗಿದೆ. ನಿರ್ದಿಷ್ಟವಾಗಿ ಕಾರಣ ಗೊತ್ತಾಗ್ತಿಲ್ಲ. ಮುಂದೇನು ಮಾಡಬೇಕು ಅನ್ನೋದು ತಿಳಿಯದಾಗಿದೆ. ಹೀಗಾಗಿ ಈ ಬಗ್ಗೆ ಸಿಎಂ ಯಡಿಯೂರಪ್ಪ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.

ಸದ್ಯಕ್ಕೆ ಭೂ ಕುಸಿತದ‌ ಸ್ಥಳಗಳಿಂದ ಸ್ಥಳಾಂತರ ಒಂದೇ ದಾರಿ. ಆದರೆ ಅಲ್ಲಿನ ಜನರು ಸ್ಥಳಾಂತರಕ್ಕೆ ಒಪ್ಪುತ್ತಿಲ್ಲ. ಇತ್ತ ನಮಗೂ ಭಯವಾಗುತ್ತಿದೆ. ಎಲ್ಲಿ ಪರಿಶೀಲನೆ ಮಾಡುವಾಗ ನಿಂತ ನೆಲ ಕುಸಿಯುತ್ತೆ ಅನ್ನೋ ಆತಂಕ ಸೃಷ್ಟಿಯಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.