ಗದಗ: ದೇಶದಲ್ಲೆಡೆ ಕೊರೊನಾ ಭೀತಿಗೆ ಜನ ತತ್ತರಿಸಿ ಹೋಗಿದ್ದಾರೆ. ಹಾಗಾಗಿ ಲಾಕ್ ಡೌನ್ ಆದೇಶ ವಿಸ್ತರಣೆಯಾಗಿದೆ. ಇದೇ ಕಾರಣಕ್ಕೆ ಜಿಲ್ಲೆಯ ಕೆನರಾ ಬ್ಯಾಂಕ್ ಸಿಬ್ಬಂದಿ ಗ್ರಾಹಕರಿಗೆ ಬ್ಯಾಂಕ್ ಮಿತ್ರ ಸೇವೆ ಆರಂಭಿಸಿದ್ದಾರೆ.
ಬ್ಯಾಂಕ್ ವ್ಯವಹಾರವನ್ನು ಗ್ರಾಹಕರ ಬಳಿ ಕೊಂಡೊಯ್ದು ಸೇವೆ ಒದಗಿಸುವ ಯೋಜನೆ ಬ್ಯಾಂಕ್ ಮಿತ್ರ. ಜನಧನ ಖಾತೆ ಯೋಜನೆಯ ಸೌಲಭ್ಯಗಳು ಹಾಗೂ ವಯೋವೃದ್ಧರಿಗೆ ಪಿಂಚಣಿ ಹಣವನ್ನು ಕೆನರಾ ಬ್ಯಾಂಕ್ ನೇರವಾಗಿ ಮನೆ ಬಾಗಿಲಿಗೆ ತಂದುಕೊಡುತ್ತಿದೆ.
ಪ್ರತಿಯೊಬ್ಬ ಗ್ರಾಹಕರ ಮನೆಗೆ ತೆರಳಿ ಸ್ಯಾನಿಟೈಜರ್, ಮಾಸ್ಕ್, ಗ್ಲೌಸ್ ಗಳನ್ನೂ ಸಹ ಕೆನರಾ ಬ್ಯಾಂಕ್ ಸಿಬ್ಬಂದಿ ವಿತರಿಸುತ್ತಿದ್ದಾರೆ. ಬ್ಯಾಂಕ್ನ ಈ ಸಾಮಾಜಿಕ ಕಳಕಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.