ಗದಗ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರನ್ನು ಜಿಲ್ಲೆಯ ಗಜೇಂದ್ರಗಡ ಪೊಲೀಸರು ಬಂಧಿಸಿದ್ದಾರೆ.
ಗಜೇಂದ್ರಗಡ ಪಟ್ಟಣದ ಕಡ್ಡಿಯವರ ಪ್ಲಾಟ್ ನಿವಾಸಿಗಳಾದ ಈರಪ್ಪ ಯಮನಪ್ಪ ರಾಠೋಡ, ವಾಸೀಮ ಅಮೀನ್ಸಾಬ್ ಬಂಗಾರಗುಂಡಿ, ವೀರೇಶ್ ಪ್ರಭಾಕರ ಪುಡೂರ, ವೀರೇಶ ಗೋವಿಂದಪ್ಪ ದ್ಯಾವನಕೊಂಡಿ ಹಾಗೂ ಶಿವಕುಮಾರ ಕಾಶಪ್ಪ ಬೆಡಗೇರಿ ಬಂಧಿತ ಆರೋಪಿಗಳು. ಈರಪ್ಪ ರಾಠೋಡ ಎಂಬಾತನ ಮನೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಹಾಗೂ ಬೆಳೆಯಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಬಂಧಿತ ಆರೋಪಿಗಳಿಂದ ಎರಡು ಬೈಕ್, 500 ಗ್ರಾಂ ಒಣ ಹಾಗೂ 3 ಕೆ.ಜಿ.ಹಸಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.