ಗದಗ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಇಡಿ ಇಲಾಖೆ ತೀವ್ರ ವಿಚಾರಣೆ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಜಿಲ್ಲೆಯ ನರಗುಂದದಲ್ಲಿ ಮಾತನಾಡಿದ ಅವರು, ಕಾನೂನು ತನ್ನ ಕೆಲಸ ಮಾಡುತ್ತದೆ. ಡಿ.ಕೆ ಶಿವಕುಮಾರ್ ನಿರಪರಾಧಿಯಾಗಿದ್ರೆ ಹೊರಗೆ ಬರುತ್ತಾರೆ ಎಂದರು. ಇದೇ ವೇಳೆ, ಕೇಂದ್ರ ಸರ್ಕಾರ ಐಟಿ, ಇಡಿ ಇಲಾಖೆ ದುರುಪಯೋಗ ಮಾಡುಕೊಳ್ತಿದೆ ಎನ್ನೋ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ನಮಗಿಂತ ಹೆಚ್ಚು ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. ತಮ್ಮ ಅನುಭವವನ್ನು ನಮ್ಮ ಮೇಲೆ ಹಾಕೋದಕ್ಕೆ ಪ್ರಯತ್ನ ಪಡುತ್ತಿದ್ದಾರೆ ಎಂದರು.
ಪ್ರಧಾನಿ ಮೋದಿ ದೇಶದ ಜನರ ಸಲುವಾಗಿ ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆಯೇ, ಹೊರತು ರಾಜಕೀಯ ವಿರೋಧಿಗಳಿಗಾಗಿಯಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.