ETV Bharat / state

ಸಹಕಾರ ಸಚಿವ ಸೋಮಶೇಖರ್ ಅವರನ್ನ ಹಾಡಿ ಹೊಗಳಿದ ಹೆಚ್ ಕೆ ಪಾಟೀಲರು.. ಅದಕ್ಕೆ ಕಾರಣ,, - hk patil appreciated minister st somashekhar

ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ಸಹಕಾರ ಕ್ಷೇತ್ರದಿಂದ 52 ಕೋಟಿ ಹಣ ಸಂಗ್ರಹಿಸಿ ದೇಣಿಗೆ ನೀಡಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ..

hk patil
ಎಚ್.ಕೆ.ಪಾಟೀಲ್
author img

By

Published : Jun 20, 2020, 10:15 PM IST

ಗದಗ : ಕೊರೊನಾ ಸಂದರ್ಭದಲ್ಲಿಯೂ ಸಚಿವ ಎಸ್ ಟಿ ಸೋಮಶೇಖರ್‌ ಜಿಲ್ಲಾ ಪ್ರವಾಸ ಮಾಡುತ್ತಾ ರಚನಾತ್ಮಕ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಗದಗ ಶಾಸಕ ಹೆಚ್ ಕೆ ಪಾಟೀಲ್ ಗುಣಗಾನ ಮಾಡಿದ್ದಾರೆ.

ಸಹಕಾರ ಸಚಿವ ಸೋಮಶೇಖರ್ ಅವರನ್ನ ಹಾಡಿ ಹೊಗಳಿದ ಶಾಸಕ ಹೆಚ್ ಕೆ ಪಾಟೀಲರು..

ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಆಶಾ ಕಾರ್ಯಕರ್ತೆಯರಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೊಮಶೇಖರ್ ಸಹಕಾರ ವಲಯವನ್ನು ಸಕ್ರಿಯವಾಗಿಟ್ಟಿದ್ದಾರೆ. ಅಧಿಕಾರ ವಹಿಸಿಕೊಂಡ ಕೇವಲ ಮೂರು ತಿಂಗಳಿನಲ್ಲಿಯೇ ಇಲಾಖೆಯ ಮಹತ್ವ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ಸಹಕಾರ ಕ್ಷೇತ್ರದಿಂದ 52 ಕೋಟಿ ಹಣ ಸಂಗ್ರಹಿಸಿ ದೇಣಿಗೆ ನೀಡಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಪ್ರತಿಯೊಬ್ಬರಿಗೂ ತಲಾ 3 ಸಾವಿರ ಪ್ರೋತ್ಸಾಹ ಧನ ನೀಡುತ್ತಿರುವುದು ಶ್ಲಾಘನೀಯ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.