ETV Bharat / state

ಹೈಮಾಸ್ಕ್ ಲೈಟ್ ಅಳವಡಿಕೆಯಲ್ಲಿ ಭ್ರಷ್ಟಾಚಾರ ಆರೋಪ.. ಗದಗ ನಗರಸಭೆ ಬಜೆಟ್ ಅಧಿವೇಶನದಲ್ಲಿ ಗದ್ದಲ

ಗದಗ ಬೆಟಗೇರಿ ನಗರಸಭೆಯ ಮೊದಲ ಬಜೆಟ್ ಅಧಿವೇಶನದಲ್ಲಿ ಹೈಮಾಸ್ಕ್ ಲೈಟ್ ಅಳವಡಿಕೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಸಿರುವುದಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಆರೋಪ ಮಾಡಿದೆ. ಈ ಬಗ್ಗೆ ಅಧ್ಯಕ್ಷೆ ಮತ್ತು ಪೌರಾಯುಕ್ತರ ವಿರುದ್ಧ ಘೋಷಣೆ ಕೂಗಲಾಗಿದೆ.

high-mask-light-installation-corruption-allegation-against-bjp
ಹೈಮಾಸ್ಕ್ ಲೈಟ್ ಅಳವಡಿಕೆಯಲ್ಲಿ ಭ್ರಷ್ಟಾಚಾರ ಆರೋಪ, ಗದಗ ನಗರಸಭೆ ಬಜೆಟ್ ಅಧಿವೇಶನದಲ್ಲಿ ಗದ್ದಲ
author img

By

Published : Mar 29, 2022, 9:20 PM IST

ಗದಗ : ಗದಗ-ಬೆಟಗೇರಿ ನಗರಸಭೆಯಲ್ಲಿ ಚುನಾವಣೆ ಬಳಿಕ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಆದರೆ ಮೊದಲ ಬಜೆಟ್ ನಲ್ಲಿ ಬಿಜೆಪಿ ಆಡಳಿತದ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಬಜೆಟ್ ಅಧಿವೇಶನದಲ್ಲಿ ಹೈಮಾಸ್ಕ್ ಲೈಟ್ ಅಳವಡಿಕೆಯಲ್ಲಿ ಭಾರಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಈ ವಿಷಯದಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ ನಡೆದಿದ್ದು, ಅಧ್ಯಕ್ಷೆ, ಪೌರಾಯುಕ್ತರ ವಿರುದ್ಧ ಘೋಷಣೆ ಕೂಗಲಾಗಿದೆ.

ಹೈಮಾಸ್ಕ್ ಲೈಟ್ ಅಳವಡಿಕೆಯಲ್ಲಿ ಭ್ರಷ್ಟಾಚಾರ ಆರೋಪ, ಗದಗ ನಗರಸಭೆ ಬಜೆಟ್ ಅಧಿವೇಶನದಲ್ಲಿ ಗದ್ದಲ

ಗದಗ -ಬೆಟಗೇರಿ ನಗರಸಭೆಯ ಮೊದಲ ಬಜೆಟ್ ಮಂಡಿಸಲಾಯಿತು. ಈ ವೇಳೆ ಬಜೆಟ್ ಮಂಡನೆಯ ವಿಷಯಕ್ಕಿಂತ ಹೆಚ್ಚು ಚರ್ಚೆಯಾಗಿದ್ದು ಹೈ ಮಾಸ್ಕ್ ಲೈಟ್ ಅಳವಡಿಕೆ ವಿಚಾರ. ಯಾವುದೇ ಟೆಂಡರ್ ಕರೆಯದೇ ಅವಳಿ ನಗರಗಳಲ್ಲಿ ಅಕ್ರಮವಾಗಿ ಸುಮಾರು 7 ಹೈ ಮಾಸ್ಕ್ ದೀಪಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಇದನ್ನು ಅಧಿಕಾರಿಗಳೇ ಅಳವಡಿಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆರೋಪ ಮಾಡಿದ್ದಾರೆ. ವಿಪರ್ಯಾಸ ಎಂದರೆ ಈ ಹೈಮಾಸ್ಕ್ ಲೈಟ್ ಅಳವಡಿಕೆ ವಿಚಾರ ಸ್ವತಃ ಆಡಳಿತರೂಢ ಬಿಜೆಪಿಯ ಸದಸ್ಯರಿಗೆ ತಿಳಿದಿರಲಿಲ್ಲವಂತೆ. ಹೀಗಾಗಿ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದರೂ ಅಧ್ಯಕ್ಷೆಯ ನೆರವಿಗೆ ಯಾರೊಬ್ಬ ಬಿಜೆಪಿ ಸದಸ್ಯರು ಬಂದಿಲ್ಲ. ಕಾಂಗ್ರೆಸ್ ಸದಸ್ಯರ ಪ್ರಶ್ನೆಗಳ ಸುರಿಮಳೆಗೆ ಅಧ್ಯಕ್ಷೆ ಉಷಾ ದಾಸರ್, ಪೌರಾಯುಕ್ತ ರಮೇಶ ಸುಣಗಾರ ಕಕ್ಕಾಬಿಕ್ಕಿಯಾದರು.

ನಗರಸಭೆಯ ಅನುದಾನದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೈ ಮಾಸ್ಕ್ ಲೈಟ್ ಅಳವಡಿಕೆ ಮಾಡಲಾಗುತ್ತಿದೆ. ಇದು ಯಾರ ಗಮನಕ್ಕೂ ತರದೆ ಖುದ್ದು ಅಧಿಕಾರಿಗಳೇ ಮಾಡುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಇದರಲ್ಲಿ ಏನೋ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿ ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿ ಅಧಿವೇಶನವನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಅಧ್ಯಕ್ಷೆ ಉಷಾ ದಾಸರ್ ವಾರ್ಡ್​ನ ಜನರ ಒತ್ತಾಯದ ಮೇರೆಗೆ ಹೈ ಮಾಸ್ಕ್ ಅಳವಡಿಕೆ ಮಾಡಲಾಗುತ್ತಿದೆ. ಈ ಬಗ್ಗೆ ನನಗೂ ಅಸ್ಪಷ್ಟವಾಗಿ ಗೊತ್ತಿದೆ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡೋದಿಲ್ಲ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ಅಧ್ಯಕ್ಷರ ಪತಿಯೇ ಇದನ್ನು ಯಾವ ಸದಸ್ಯರ ಗಮನಕ್ಕೆ ತರದೇ ಅಧಿಕಾರಿಗಳಿಗೆ ಒತ್ತಡ ಹಾಕಿ ಅಕ್ರಮವಾಗಿ ಹೈ ಮಾಸ್ಕ್ ಅಳವಡಿಸುತ್ತಿದ್ದಾರೆ ಅನ್ನೋ ಮಾತು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿದೆ. ಈಗಾಗಲೇ ಕರಿಯಮ್ಮ ಕಲ್ಲು ಏರಿಯಾದಲ್ಲಿ ಅಳವಡಿಕೆ ಮಾಡಿರೋ ಹೈ ಮಾಸ್ಕ್ ನ ಉದ್ಘಾಟನೆಗೆ ತೆರಳುತ್ತಿದ್ದಾರೆ. ಈ ಬಗ್ಗೆ ಉದ್ಘಾಟನೆಯ ಆಮಂತ್ರಣ ಪತ್ರಿಕೆಯಲ್ಲಿ ಅಧ್ಯಕ್ಷರ ಹೆಸರು ಪ್ರಕಟವಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಅಧ್ಯಕ್ಷೆ ಉಷಾ ದಾಸರ್​ ವಾರ್ಡ್ ನಂಬರ್ 35ರಲ್ಲಿ ಮೂರು ಹೈಮಾಸ್ಕ್ ದೀಪ ಅಳವಡಿಸಲಾಗುತ್ತಿದೆ ಅಂತ ಆರೋಪಿಸಿದರು. ಒಟ್ಟಿನಲ್ಲಿ ಹೈ ಮಾಸ್ಕ್ ಅಳವಡಿಕೆ ಒಂದು ಕಡೆ ಬಜೆಟ್ ಅದಿವೇಶನವನ್ನ ನುಂಗಿ ನೀರು ಕುಡಿದರೆ ಇನ್ನೊಂದೆಡೆ ಆರಂಭದಲ್ಲಿಯೇ ಅಧ್ಯಕ್ಷರ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಮುಂದೆ ಈ ವಿಚಾರ ಯಾವ ತಿರುವು ಪಡೆದುಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ಓದಿ : ಶಾಸ್ತ್ರಗಳ ಅಧ್ಯಯನಕ್ಕಾಗಿ ಸಂಸ್ಕೃತ ವಿಶ್ವವಿದ್ಯಾಲಯದಿಂದ 'ರನ್ ಫಾರ್ ಸಂಸ್ಕೃತ್'

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.