ETV Bharat / state

ಡಿಸಿ ಕಚೇರಿ ಭದ್ರತಾ ಕೊಠಡಿಯಲ್ಲಿ ಡೆತ್​ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ಪೇದೆ ಆತ್ಮಹತ್ಯೆ!

ಕರ್ತವ್ಯದಲ್ಲಿರುವಾಗಲೇ ಡೆತ್​ನೋಟ್​ ಬರೆದಿಟ್ಟು ಡಿಎಆರ್ ಹೆಡ್ ಕಾನಸ್ಟೇಬಲ್ ಕೆ.ಎಸ್​.ಕೊಪ್ಪದ ಅವರು ಭದ್ರತೆಗೆ ನೀಡಲಾಗಿದ್ದ ರೈಫಲ್​ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Headconstable K.S.Koppada
ಹೆಡ್​ ಕಾನ್​​ಸ್ಟೆಬಲ್​ ಕೆ.ಎಸ್.ಕೊಪ್ಪದ
author img

By

Published : Jun 16, 2022, 7:07 AM IST

ಗದಗ : ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಹೆಡ್ ಕಾನ್ಸ್​​ಟೇಬಲ್​​ ಡೆತ್​ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದೆ. ಗದಗದಲ್ಲಿ ಡಿಎಆರ್ ಹೆಡ್ ಕಾನ್​​ಸ್ಟೇಬಲ್​ ಆಗಿದ್ದ ಕೆ.ಎಸ್.ಕೊಪ್ಪದ ಕರ್ತವ್ಯಯಲ್ಲಿರುವಾಗಲೇ ಭದ್ರತೆಗೆ ನೀಡಲಾಗಿದ್ದ 303 ರೈಫಲ್​ನಿಂದ ಕುತ್ತಿಗೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೇದೆ ಗದಗ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಖಜಾನೆ ಕಚೇರಿಯ ಭದ್ರತಾ ಕೊಠಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ಮಧ್ಯಾಹ್ನದಿಂದ ಸಂಜೆ 9 ಗಂಟೆಗೆ ಡ್ಯೂಟಿ ಇತ್ತು. ಆದರೆ, ಇನ್ನೊಬ್ಬ ಪೇದೆ ಬಂದು ಇವರನ್ನು ರಿಲೀವ್ ಮಾಡುವ ಹೊತ್ತಿಗೆ ಅಂದರೆ ಸುಮಾರು 8.30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪೇದೆ ಕಾಣಿಸಿಕೊಂಡಿದ್ದರು. ಬಳಿಕ ವಿಷಯ ಬೆಳಕಿಗೆ ಬಂದಿದೆ.

ಡಿಸಿ ಕಚೇರಿ ಭದ್ರತಾ ಕೊಠಡಿಯಲ್ಲಿ ಡೆತ್​ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ಪೇದೆ ಆತ್ಮಹತ್ಯೆ!

ಪೇದೆ ಕೊಪ್ಪದ ಅವರಿಗೆ ಮದುವೆಯಾಗಿದ್ದು, ವಿಚ್ಛೇದನ ಸಂಬಂಧವಾಗಿ ಕೋರ್ಟ್​ನಲ್ಲಿ ವಿಚಾರಣೆ ನಡೆದಿತ್ತು ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಡೆತ್​ನೋಟ್​ನಲ್ಲಿ ಇದ್ಯಾವ ವಿಚಾರವನ್ನೂ ಪ್ರಸ್ತಾಪಿಸಿಲ್ಲ. ಕೇವಲ ನನಗೆ ಸ್ನಾನ ಮಾಡಲು ಶೇವಿಂಗ್ ಮಾಡಿಸಿಕೊಳ್ಳಲು ಮನಸ್ಸಾಗುತ್ತಿಲ್ಲ. ತಂದೆಗೆ ಆರೋಗ್ಯ ಸರಿಯಿಲ್ಲ ಎನ್ನುವುದನ್ನೂ ಸಹ ಬರೆದಿದ್ದಾನೆ. ಸಹೋದ್ಯೋಗಿಗಳು ಸಹ ಕೆಲಸದಲ್ಲಿ ಅಸಹಕಾರ ತೋರುತ್ತಿದ್ದಾರೆ ಎಂದೂ ಬರೆದಿಟ್ಟಿದ್ದಾನೆ. ಈ ಬಗ್ಗೆ ಅವರ ತಂದೆ ಪ್ರತಿಕ್ರಿಯೆ ನೀಡಿದ್ದು, ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎಂಬುದನ್ನು ತಿಳಿಸಿದ್ದಾರೆ.

ಇದನ್ನೂ ಓದಿ : ಮೂರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.