ಗದಗ: ಎಪಿಎಂಸಿಯಲ್ಲಿ ಒಣಮೆಣಸಿನಕಾಯಿ ಇ-ಟೆಂಡರ್ನಲ್ಲಿ ಗೋಲ್ಮಾಲ್ ಆಗಿದೆ. ರೈತರು ಹಾಗೂ ಖರೀದಿದಾರರ ಮಧ್ಯೆ ಮಾತಿನ ಚಕಮಕಿಯೂ ನಡೆದಿದೆ.
ಇ-ಟೆಂಡರ್ನಲ್ಲಿ ಆದ ಬೆಲೆಗಿಂತ ಕಡಿಮೆ ಬೆಲೆ ನೀಡಲು ಖರೀದಿದಾರರು ಮುಂದಾದಾಗ ರೈತರು ಹಾಗೂ ಖರೀದಿದಾರರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಎಪಿಎಂಸಿಯ ಎಂ ಎಂ ಕನವಳ್ಳಿ ಅವರ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ರೋಣ ತಾಲೂಕಿನ ಚಿಕ್ಕಮಣ್ಣೂರು ಗ್ರಾಮದ ರೈತ ಬಸವಲಿಂಗಪ್ಪ ಈಶ್ವರಪ್ಪ ಮೇಟಿ ಸೇರಿ ಮತ್ತೊಬ್ಬ ರೈತ ಮೋಸ ಹೋಗಿದ್ದಾರೆ.
ಇ-ಟೆಂಡರ್ನಲ್ಲಿ ಇಬ್ಬರೂ ರೈತರದ್ದು ಕ್ರಮವಾಗಿ ಕ್ವಿಂಟಲ್ಗೆ ₹13,175 ಹಾಗೂ 11, 250 ರೂಪಾಯಿಗಳಾಗಿದೆ. ಅವರಿಗೆ ಖರೀದಿದಾರರು,12,170 ರೂಪಾಯಿ ಹಾಗೂ 7, 200 ರೂಪಾಯಿಗಳನ್ನು ನೀಡಲು ಮುಂದಾಗಿದ್ದಾರೆ. ಇದರಿಂದ ಕುಪಿತಗೊಂಡ ರೈತರು, ತಮಗೆ ಇ-ಟೆಂಡರ್ನಲ್ಲಿ ಸಿಕ್ಕ ಬೆಲೆ ನೀಡುವಂತೆ ಆಗ್ರಹಿಸಿದಾಗ ಗಲಾಟೆ ನಡೆದಿದೆ.