ETV Bharat / state

ಜಿಮ್ಸ್​ನಲ್ಲಿ ವೆಂಟಿಲೇಟರ್​ಗಳ ಕೊರತೆ ಆರೋಪ: ಜಿಮ್ಸ್​ ನಿರ್ದೇಶಕರು ಹೇಳೋದೇನು..?

ಮೂರು ದಿನದಿಂದ ತನ್ನ ಸಹೋದರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರೂ ವೆಂಟಿಲೇಟರ್ ಅಳವಡಿಸದೇ ವೈದ್ಯರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಕ್ಕೆ ಜಿಮ್ಸ್​ ನಿರ್ದೇಶಕ ಸ್ಪಷ್ಟನೆ ನೀಡಿದ್ದಾರೆ.

gims director
ಜಿಮ್ಸ್​ ನಿರ್ದೇಶಕ
author img

By

Published : Jul 7, 2020, 6:03 PM IST

ಗದಗ: ಕೊರೊನಾ ರೋಗಿಗಳಿಗೆ ಅಂತಾನೇ ಜಿಲ್ಲೆಯ ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೆಂಟರ್ ತೆರೆಯಲಾಗಿದೆ. ಆದರೂ ಕೂಡಾ ಇಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬುದು ಸೋಂಕಿತರೊಬ್ಬರ ಸಹೋದರಿ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಿದ್ದರು. ಆಕೆಯೂ ಕೂಡಾ ಸೋಂಕಿತೆಯಾಗಿದ್ದು, ಮೂರು ದಿನದಿಂದ ತನ್ನ ಸಹೋದರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರೂ ವೆಂಟಿಲೇಟರ್ ಅಳವಡಿಸದೇ ವೈದ್ಯರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪ ಮಾಡಿದ್ದಳು.

ಜಿಮ್ಸ್​ ನಿರ್ದೇಶಕ

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಜಿಮ್ಸ್​ ನಿರ್ದೇಶಕ ಪಿ.ಎಸ್.ಭೂಸರೆಡ್ಡಿ ನಮ್ಮಲ್ಲಿ ವೆಂಟಿಲೇಟರ್​​ಗಳಿಗೆ ಯಾವುದೇ ಸಮಸ್ಯೆ ಇಲ್ಲ. ರೋಗಿಯ ದೈಹಿಕ ಅವಶ್ಯಕತೆಗನುಗುಣವಾಗಿ ವೆಂಟಿಲೇಟರ್ ಅಳವಡಿಸಲಾಗುತ್ತದೆ. ರೋಗಿಗೆ ಯಾವಾಗ?, ಯಾವ ಬಗೆಯ ಚಿಕಿತ್ಸೆ ನೀಡಬೇಕು? ಎಂಬುದನ್ನು ವೈದ್ಯರು ನಿರ್ಧಾರ ಮಾಡುತ್ತಾರೆ. ನಮ್ಮಲ್ಲಿ ಯಾವುದೇ ಬಗೆಯ ವೆಂಟಿಲೇಟರ್​ ಕೊರತೆಯಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಜಿಮ್ಸ್​ನಲ್ಲಿ ಕೊರೊನಾ ಸೋಂಕಿತನ ನರಳಾಟ: ವೈದ್ಯರ ನಿರ್ಲಕ್ಷ್ಯ ಆರೋಪ

ಇನ್ನು ಸೋಂಕಿತ ವ್ಯಕ್ತಿ ನರಗುಂದ ಪಟ್ಟಣದಲ್ಲಿ ಬಸ್​ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದನು. ಈತನಿಂದ ಮೂರು ಮಕ್ಕಳೂ ಸೇರಿ ಕುಟುಂಬದ ಏಳು ಮಂದಿ ಹಾಗೂ ಅಕ್ಕಪಕದವರೂ ಸೇರಿ ಒಟ್ಟು 11 ಜನರಿಗೆ ಸೋಂಕು ಹರಡಿತ್ತು. ನಂತರ ಈತನನ್ನು ಗದಗ್​ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಆತನ ಸಹೋದರಿ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಿದ್ದಳು.

ಜಿಮ್ಸ್​​ ನಿರ್ದೇಶಕರ ಪ್ರಕಾರ ಉಸಿರಾಟದ ಸಮಸ್ಯೆಯಿರುವ ಇನ್ನೂ ಇಪ್ಪತ್ತು ಜನ ರೋಗಿಗಳು ದಾಖಲಾದರೂ ಅವರಿಗೆ ಸೂಕ್ತ ವ್ಯವಸ್ಥೆ ಇದೆ. ಆದರೆ ವಿಡಿಯೋದಲ್ಲಿರುವುದು ಸತ್ಯವೋ..? ಅಥವಾ ಜಿಮ್ಸ್ ನಿರ್ದೇಶಕರು ಹೇಳುವುದು ಸತ್ಯವೊ..? ಎಂಬುದು ಇನ್ನು ಮುಂದಷ್ಟೇ ಗೊತ್ತಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.