ಗದಗ: ಕಿಲ್ಲರ್ ಕೊರೊನಾ ಹರಡದಂತೆ ತಡೆಯಲು ಜಿಲ್ಲೆಯಲ್ಲಿ ಎರಡನೇಯ ಹಂತದ ಲಾಕ್ ಡೌನ್ ಘೋಷಣೆ ಮಾಡಿದರೂ ಜನರು ಎಚ್ಚೆತ್ತುಕೊಂಡಿಲ್ಲ.
ಹೌದು ಜಿಲ್ಲೆಯಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದು, ಜನರು ಹೊರಬಾರದು, ಗುಂಪಾಗಿ ಸೇರಬಾರದು ಎಂಬ ಆದೇಶವಿದ್ದರೂ ಗದಗದ ಮಂದಿ ಮಾತ್ರ ತಿಳಿದೂ ತಿಳಿಯದವರಂತೆ ವರ್ತಿಸುತ್ತಿದ್ದಾರೆ. ಜಿಲ್ಲೆಯ ಬೆಟಗೇರಿಯ ನರಸಾಪುರದ ಬಳಿ ಇರೋ ಶ್ರೀ ಲಕ್ಕಮ್ಮದೇವಿ ದೇವಸ್ಥಾನದಲ್ಲಿ ನೆರವೇರಿದ ಆರಾಧನೆಗೆ ಜನಜಂಗುಳಿ ಸೇರಿದ್ದು ಸರ್ಕಾರಿ ನಿಯಮಕ್ಕೆ ಡೋಂಟ್ ಕೇರ್ ಎಂದಿದ್ದಾರೆ.
ಕೊನೆಪಕ್ಷ ಆರಾಧನೆ ವೇಳೆ ಮಾಸ್ಕ್ ಧರಿಸಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡ ದೂರದ ಮಾತಾಗಿತ್ತು.