ಗದಗ : ಜಿಲ್ಲೆಯ 289 ಕೊರೊನಾ ಶಂಕಿತರ ಸ್ಯಾಂಪಲ್ಸ್ ವರದಿಗಾಗಿ ಜಿಲ್ಲಾಡಳಿತ ನಿರೀಕ್ಷಿಸುತ್ತಿದೆ.
ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಪಾಸಿಟಿವ್ ಪ್ರಕರಣಗಳು ಇಲ್ಲದಿದ್ದರೂ, ಸ್ಯಾಂಪಲ್ಸ್ ಕಳಿಸಿರುವವರ ವರದಿ ಕೈ ಸೇರುವವರೆಗೆ ಏನೂ ನಿರ್ಧರಿಸುವಂತಿಲ್ಲ. ಆರಂಭದಲ್ಲಿ ಜಿಲ್ಲೆಯ 5 ಜನರಿಗೆ ಸೋಂಕು ದೃಢಪಟ್ಟಿತ್ತು, ಆ ಪೈಕಿ ಓರ್ವ ವೃದ್ದೆ ಮೃತಪಟ್ಟಿದ್ದರು ಹಾಗೂ ಉಳಿದ ನಾಲ್ಕು ಮಂದಿಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಪ್ರಸ್ತುತ ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲ.
ಈಗಾಗಲೇ ಗದಗ ನಗರದ ಗಂಜಿ ಬಸವೇಶ್ವರ ಓಣಿ ಹಾಗೂ ರೋಣ ತಾಲೂಕಿನ ಕೃಷ್ಣಾಪುರದ ಕಂಟೇನ್ಮೆಂಟ್ ಝೋನ್ಗಳಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲಾಗಿದ್ದು, ವರದಿಗಾಗಿ ನಿರೀಕ್ಷಿಸಲಾಗುತ್ತಿದೆ. ಪ್ರಮುಖವಾಗಿ ಕೃಷ್ಣಾಪುರದ ಕೊರೊನಾ ಶಂಕಿತ ಗರ್ಭಿಣಿ ಮತ್ತು ಆಕೆಯೊಂದಿಗೆ ಸಂಪರ್ಕ ಹೊಂದಿದ್ದವರ ವರದಿಗಾಗಿ ಕಾಯಲಾಗುತ್ತಿದೆ. ಎಲ್ಲಾ 289 ಜನರ ವರದಿ ಬಂದ ಬಳಿಕವಷ್ಟೆ ಜಿಲ್ಲೆಯ ಸ್ಥಿತಿಗತಿ ಗೊತ್ತಾಗಲಿದೆ.