ETV Bharat / state

Funeral of Sanganabasava Swamiji : ಇಂದು ಹಾಲಕೆರೆ ಅನ್ನದಾನೇಶ್ವರ ಸ್ವಾಮೀಜಿಗಳ ಅಂತ್ಯಕ್ರಿಯೆ.. - ಹಾಲಕೆರೆ ಗ್ರಾಮ

ಅನ್ನದಾನೇಶ್ವರ ಸಂಸ್ಥಾನಮಠದ ಡಾ.ಸಂಗನಬಸವ ಸ್ವಾಮೀಜಿಯವರ ಅಂತ್ಯಕ್ರಿಯೆ ಇಂದು ಸಂಜೆ ಹಾಲಕೆರೆ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮುದಾಯದ ವಿಧಿ ವಿಧಾನದಂತೆ ಹಾಗೂ ಸಕಲ ಸರ್ಕಾರಿ ಗೌರವಗಳೊಂದಗೆ ಜರುಗಲಿದೆ.

Funeral of Sanganabasava Swamiji
Funeral of Sanganabasava Swamiji
author img

By

Published : Nov 23, 2021, 10:22 AM IST

Updated : Nov 23, 2021, 10:49 AM IST

ಗದಗ: ಅನಾರೋಗ್ಯದಿಂದಾಗಿ ನಿನ್ನೆ ಲಿಂಗೈಕ್ಯರಾದ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ (Halakere Annadatheshwara Mutt) ಕಾಯಕಯೋಗಿ,‌ ತ್ರಿವಿಧ ದಾಸೋಹಿ ಅಭಿನವ ಅನ್ನದಾನೇಶ್ವರ ಡಾ.ಸಂಗನಬಸವ ಸ್ವಾಮೀಜಿಯವರ (85) ಅಂತ್ಯಕ್ರಿಯೆ (Funeral of Sanganabasava Swamiji) ಇಂದು ಸಂಜೆ ನೆರವೇರಲಿದೆ.

ತಡರಾತ್ರಿ ಹಾಲಕೆರೆ ಗ್ರಾಮಕ್ಕೆ ಆಗಮಿಸಿದ ಸ್ವಾಮೀಜಿಗಳ ಪಾರ್ಥೀವ ಶರೀರ

ಹಾಲಕೆರೆ ಗ್ರಾಮದಲ್ಲಿ (Halakere Village of Gadag) ವೀರಶೈವ ಲಿಂಗಾಯತ ಸಮುದಾಯದ ವಿಧಿ ವಿಧಾನದಂತೆ ಹಾಗೂ ಸಕಲ ಸರ್ಕಾರಿ ಗೌರವಗಳೊಂದಗೆ ಅಂತ್ಯಕ್ರಿಯೆ ಜರುಗಲಿದೆ. ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಭಕ್ತರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಡಾ.ಸಂಗನಬಸವ ಸ್ವಾಮೀಜಿ ಲಿಂಗೈಕ್ಯ, ಸುತ್ತೂರು ಶ್ರೀಗಳ ಸಂತಾಪ

ನಿನ್ನೆ ತಡರಾತ್ರಿ ಸ್ವಾಮೀಜಿಗಳ ಪಾರ್ಥೀವ ಶರೀರ ಹಾಲಕೆರೆ ಗ್ರಾಮಕ್ಕೆ ಆಗಮಿಸುತಿದ್ದಂತೆ ಭಕ್ತರ ಆಕ್ರಂದನ ಮುಗಿಲು ಮುಟ್ಟಿತ್ತು. ಮಹಿಳೆಯರು, ಮಕ್ಕಳು ಎನ್ನದೇ ಎಲ್ಲರೂ ಶ್ರೀಗಳನ್ನು ನೆನೆದು ಕಣ್ಣಿರು ಹಾಕುತ್ತಿದ್ದಾರೆ.

Last Updated : Nov 23, 2021, 10:49 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.