ಗದಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತ 80 ವರ್ಷದ ವೃದ್ಧೆಯೊಬ್ಬರು ಸಾವನಪ್ಪಿದ್ದಾರೆ.
ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ವಿಷಯ ಖಚಿತಪಡಿಸಿದ್ದಾರೆ. ಗದಗ ನಗರದ ರಂಗನವಾಡಿಗಲ್ಲಿಯಲ್ಲಿ ವಾಸಿಸುತ್ತಿದ್ದ ಈ ವೃದ್ಧೆಯನ್ನು ಏಪ್ರಿಲ್ 4 ರಂದು ಕೊರೊನಾ ಸೋಂಕು ಶಂಕೆ ಮೇರೆಗೆ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೃದ್ದೆಗೆ ಎರಡು ದಿನಗಳ ಹಿಂದೆ ಅಂದರೆ ಏಪ್ರಿಲ್ 7ಕ್ಕೆ ಸೋಂಕು ಇರುವುದು ದೃಢಪಟ್ಟಿತ್ತು. ಆನಂತರ ಚಿಕಿತ್ಸೆ ಮುಂದುವರೆದಿತ್ತು ಆದರೆ, ಅವರು ಚಿಕಿತ್ಸೆ ಫಲಕಾರಿಯಾಗಿದೆ ರಾತ್ರಿ ಆಸ್ಪತ್ರೆಯಲ್ಲೇ ಸಾವನಪ್ಪಿದ್ದಾರೆ.
ಹೈ ಅಲರ್ಟ್ ಘೋಷಣೆ: ವೃದ್ಧೆ ಸಾವಿನ ಹಿನ್ನೆಲೆ ಗದಗ ಜಿಲ್ಲಾಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇನ್ನು ಜಿಲ್ಲೆಯ ಜನರಲ್ಲಿ ಆತಂಕದ ಛಾಯೆ ಮೂಡಿದೆ. ಯಾರ ಸಂಪರ್ಕವೂ ಇರದ ವೃದ್ದೆಗೆ ಸೋಂಕು ತಗುಲಿರುವುದಾದ್ರೂ ಹೇಗೆ ಎನ್ನುವುದು ಇಲ್ಲಿ ಆಶ್ಚರ್ಯಕರ ಸಂಗತಿ.
ಇನ್ನು ನಿನ್ನೆಯ ವರದಿ ಪ್ರಕಾರ ಅಜ್ಜಿ ಸಂಪರ್ಕದಲ್ಲಿದ್ದ 42 ಜನರ ವರದಿಯೂ ನೆಗೆಟಿವ್ ಬಂದಿದೆ. ಆದ್ರೆ ವೃದ್ದೆಗೆ ಸೋಂಕು ದೃಢಪಟ್ಟಿದ್ದು, ಹೇಗೆ ಎನ್ನುವುದು ಅಧಿಕಾರಿಗಳಿಗೆ ತಲೆ ಬಿಸಿಯಾಗಿದೆ. ವೃದ್ದೆಯ ಅಂತ್ಯಕ್ರಿಯೆ ಬಗ್ಗೆ ಜಿಲ್ಲಾಡಳಿತ ಚರ್ಚೆ ನಡೆಸುತ್ತಿದೆ. ವಿಪತ್ತು ನಿರ್ವಹಣಾ ನಿಯಮಗಳ ಪ್ರಕಾರ ವೃದ್ಧೆಯ ಅಂತ್ಯ ಸಂಸ್ಕಾರ ನಡೆಯುತ್ತದೆ ಎಂದು ಹಿರೇಮಠ ತಿಳಿಸಿದ್ದಾರೆ.