ETV Bharat / state

ಕುಡಿದ ಅಮಲಿನಲ್ಲಿ ಚಾಕು ಇರಿತ: ಗದಗದಲ್ಲಿ ಪ್ರಕರಣ ದಾಖಲು! - ಕುಡಿದ ಅಮಲಿನಲ್ಲಿ ಚಾಕು ಇರಿತ

ನಿಖಿಲ್ ಶೌಚಾಲಯಕ್ಕೆ ಹೋಗುವಾಗ ಎದುರುಗಡೆಯಿಂದ ಬಂದ ಬುಲೆಟ್ ಪವ್ಯನ ಎದೆಗೆ ಅಕಸ್ಮಾತ್​ ಆಗಿ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕುಪಿತಗೊಂಡ ಬುಲೆಟ್ ಪವ್ಯ ಮತ್ತು ನಿಖಿಲ್ ನಡುವೆ ಜಗಳ ಆರಂಭವಾಗಿ ಕೊನೆಗೆ ನಿಖಿಲ್​​ಗೆ ಚೂರಿಯಿಂದ ಇರಿದಿದ್ದಾರೆ ಎನ್ನಲಾಗಿದೆ.

fight between 2 in gadag: case registered
ಕುಡಿದ ಅಮಲಿನಲ್ಲಿ ಚಾಕು ಇರಿತ: ಗದಗದಲ್ಲಿ ಪ್ರಕರಣ ದಾಖಲು!
author img

By

Published : Oct 11, 2020, 10:09 PM IST

ಗದಗ: ಕುಡಿದ ನಶೆಯಲ್ಲಿ ಹೊಡೆದಾಡಿ ಎದೆಗೆ ಚಾಕು ಹಾಕಿದ ಘಟನೆ ಗದಗದಲ್ಲಿ ನಡೆದಿದೆ.

ನಗರದಲ್ಲಿ ಇರುವ ಖಾಸಗಿ ಹೊಟೆಲ್​​ನಲ್ಲಿ ಈ ಘಟನೆ ನಡೆದಿದ್ದು, ಬೆಟಗೇರಿಯ ಹೆಲ್ತ್ ಕ್ಯಾಂಪ್ ನಿವಾಸಿ ನಿಖಿಲ್ ಮುದಗಲ್ ಚಾಕು ಇರಿತಕ್ಕೊಳಗಾಗಿರುವ ವ್ಯಕ್ತಿ ಎಂದು ತಿಳಿದುಬಂದಿದೆ. ಹೊಟೆಲ್​​ನಲ್ಲಿ ಪವನ್ ಕುಮಾರ ಅಲಿಯಾಸ್ ಬುಲೆಟ್ ಪವ್ಯ ಹಾಗೂ ಪವನ್ ಸಕ್ರಿ ಎಂಬ ಇಬ್ಬರು ಮದ್ಯ ಸೇವನೆಗೆ ಕೂತಿದ್ದರು. ಚೂರಿ ಇರಿತಕ್ಕೊಳಗಾದ ನಿಖಿಲ್ ಶೌಚಾಲಯಕ್ಕೆ ಹೋಗುವಾಗ ಎದುರುಗಡೆಯಿಂದ ಬಂದ ಬುಲೆಟ್ ಪವ್ಯನ ಎದೆಗೆ ಅಕಸ್ಮಾತ್ತಾಗಿ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕುಪಿತಗೊಂಡ ಬುಲೆಟ್ ಪವ್ಯ ಮತ್ತು ನಿಖಿಲ್ ನಡುವೆ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಬುಲೆಟ್ ಪವ್ಯನ ಗೆಳೆಯ ಪವನ್ ಸಕ್ರಿ ಸಹ ಜಗಳದಲ್ಲಿ ಎಂಟ್ರಿ ಕೊಟ್ಟಿದ್ದಾನೆ.

ಬಳಿಕ ಪವ್ಯ ಮತ್ತು ಪವನ್ ಇಬ್ಬರು ಸೇರಿ ನಿಖಿಲ್​​ಗೆ ಚೂರಿಯಿಂದ ಇರಿದಿದ್ದಾರೆ ಎನ್ನಲಾಗಿದೆ. ಇನ್ನು ಚೂರಿ ಇರಿತಕ್ಕೊಳಗಾದ ನಿಖಿಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆಗೆ ತೆರಳಿದ್ದಾನೆ. ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಗದಗ ನಗರ ಠಾಣೆಯಲ್ಲಿ ಕುರಿತು ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.