ಗದಗ: ಜಿಲ್ಲೆಯ ಡಂಬಳ ಗ್ರಾಮದ ಹೈದರಸಾಬ್ ಥಾಂಬೋಟಿ ಎಂಬ ರೈತ 2 ಎಕರೆ ಪ್ರದೇಶದಲ್ಲಿ ಬೆಳೆದ 200 ಚೀಲದಷ್ಟು ಈರುಳ್ಳಿ ಮಾರಲಾಗದೇ ಕಂಗಲಾಗಿದ್ದಾನೆ.
ಇವರು ಮನೆಯಲ್ಲಿರುವ ಬಂಗಾರದ ಒಡವೆಗಳನ್ನ ಅಡವಿಟ್ಟು 6 ಲಕ್ಷ ಹಣ ಹೊಂದಿಸಿ ಬೆಳೆ ಬೆಳೆದಿದ್ದರು. ಸುಮಾರು 2ರಿಂದ 3 ಲಕ್ಷ ರೂಪಾಯಿ ಬೆಲೆಬಾಳುವ ಈರುಳ್ಳಿ ಚೀಲವೊಂದಕ್ಕೆ ಈಗ 200ರಿಂದ 300 ರೂಪಾಯಿಗೆ ಕೇಳುತ್ತಿದ್ದಾರೆ. ಇಷ್ಟಕ್ಕೇ ಮಾರಿದರೆ ವಾಹನದ ಬಾಡಿಗೆ ಸಹ ಕಟ್ಟೋಕಾಗಲ್ಲ ಎನ್ನುತ್ತಾರೆ ರೈತ.
ಸರ್ಕಾರ ತಮ್ಮ ಕಷ್ಟಕ್ಕೆ ಸ್ಪಂದಿಸಿ, ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಒದಗಿಸಲು ಮನವಿ ಮಾಡಿದ್ದಾರೆ.