ETV Bharat / state

ನಕಲಿ ಬಿತ್ತನೆ ಬೀಜ ರವಾನೆ ಬಗ್ಗೆ ಕೇಂದ್ರ ಕೃಷಿ ಸಚಿವಾಲಯ ಎಚ್ಚರಿಕೆ: ಗದಗ್‌ನಲ್ಲೂ ಆವರಿಸಿದೆ ಭೀತಿ - ನಕಲಿ ಬಿತ್ತನೆ ಬೀಜ ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ರವಾನೆ

ಚೀನಾ ದೇಶ ನಕಲಿ ಬಿತ್ತನೆ ಬೀಜಗಳನ್ನು ಸೃಷ್ಟಿಸಿ ಭಾರತೀಯ ರೈತರಿಗೆ ಕಳುಹಿಸುತ್ತಿರುವುದಾಗಿ ಕೇಂದ್ರ ಕೃಷಿ ಇಲಾಖೆ ರಾಜ್ಯಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆ ಗದಗ ಜಿಲ್ಲೆಯ ರೈತರು ನಕಲಿ ಬೀಜ ಹಾವಳಿಗೆ ಕಂಗಾಲಾಗಿದ್ದು ಈ ಕುರಿತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Fake Seed Transport from china
ನಕಲಿ ಬೀಜ ರವಾನೆ
author img

By

Published : Aug 28, 2020, 8:34 PM IST

ಗದಗ : ಮಾರುಕಟ್ಟೆಗೆ ನಕಲಿ ಬಿತ್ತನೆ ಬೀಜ ಲಗ್ಗೆಯಿಟ್ಟಿದೆ ಅನ್ನೋ ಮಾತುಗಳು ರೈತಾಪಿ ವರ್ಗವನ್ನು ಕಾಡುತ್ತಿವೆ. ಅಲ್ಲದೆ ಅವುಗಳು ಚೀನಾದಿಂದ ಆಮದಾಗಿರೋ ಜೈವಿಕ ಬಿತ್ತನೆ ಬೀಜಗಳಾಗಿದ್ದು, ಈ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಕೇಂದ್ರ ಕೃಷಿ ಇಲಾಖೆ ಈಗಾಗಲೇ ಸೂಚನೆ ನೀಡಿದೆ.

ನಕಲಿ ಬೀಜ ರವಾನೆ, ರಾಜ್ಯವನ್ನು ಎಚ್ಚರಿಸಿದ ಕೇಂದ್ರ ಕೃಷಿ ಸಚಿವಾಲಯ

ಚೀನಾ ಜೈವಿಕ ಬಿತ್ತನೆ ಬೀಜಗಳನ್ನು ಭಾರತೀಯ ರೈತರ ಮನೆಗೆ ಪಾರ್ಸಲ್ ಕಳುಹಿಸುತ್ತಿದೆ. ಕೊರೊನಾ ಹರಡಿರೋ ಚೀನಾದ ಈ ಕೃತ್ಯವನ್ನೀಗ ಗದಗ ಜಿಲ್ಲೆಯ ರೈತರು ಖಂಡಿಸಿದ್ದಾರೆ. ಜೊತೆಗೆ ನಕಲಿ ಬೀಜ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Fake Seed Transport from china
ಕೇಂದ್ರ ಕೃಷಿ ಸಚಿವಾಲಯ ಎಚ್ಚರಿಕೆ
ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ನಮಗೂ ಸಹ ಈ ‌ಬಗ್ಗೆ ಎಚ್ಚರಿಕೆ ನೋಟಿಸ್ ಬಂದಿದೆ. ರೈತರು ಅನಾಮಧೇಯ ವ್ಯಕ್ತಿಗಳಿಂದ ಬರುವ ಪಾರ್ಸಲ್​ಗಳ ಬಗ್ಗೆ ಕೃಷಿ ಇಲಾಖೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ವಿನಂತಿಸಿದ್ದಾರೆ. ಈ ಬಗೆಯ ಜೈವಿಕ ಬಿತ್ತನೆ‌ ಬೀಜಗಳಿಂದ ಹಲವು ಬಗೆಯ ತೊಂದರೆ ಉಂಟಾಗಬಹುದು. ವೈರಲ್ ರೋಗಗಳೂ ಸಹ ಹರಡುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.