ETV Bharat / state

ಸರ್ಕಾರದ ವಿರುದ್ಧ ಮತ್ತೊಂದು ಹೊಸ ಬಾಂಬ್​ ಸಿಡಿಸಿದ ದಿಂಗಾಲೇಶ್ವರ ಶ್ರೀ

ಹತ್ತು ವರ್ಷಗಳ ಹಿಂದೆ ಬಿಡುಗಡೆಯಾದ 2 ಕೋಟಿ ರೂ. ಅನುದಾನದಲ್ಲಿ 1.25 ಕೋಟಿ ಹಣ ಗುಳುಂ ಮಾಡಲಾಗಿದೆ. ಪ್ರತಿಷ್ಠಿತ ಮಠಾಧೀಶರೊಬ್ಬರು ಸರ್ಕಾರದಿಂದ ಬಂದಿರೋ ಯಾವುದೇ ಹಣ ಕಟ್ ಆಗದಂತೆ ಡಿಸಿಯವರ ಮೂಲಕ ಬರುತ್ತದೆ ಎಂದು ಹೇಳಿದ್ದಾರೆ. ಆದ್ರೆ ನಾನು ನೇಮಕಗೊಂಡ ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಡಿಸಿಯವರ ಮೂಲಕ ನೇರವಾಗಿ ಬರಲಿಲ್ಲ ಏಕೆ ಎಂದು ದಿಂಗಾಲೇಶ್ವರ ಶ್ರೀ ಪ್ರಶ್ನಿಸಿದ್ದಾರೆ.

author img

By

Published : Apr 24, 2022, 7:56 PM IST

Dingaleshwar Swamiji
ದಿಂಗಾಲೇಶ್ವರ ಶ್ರೀ

ಗದಗ: ಫಖೀರ್ ದಿಂಗಾಲೇಶ್ವರ ಶ್ರೀ ಸರ್ಕಾರದ ವಿರುದ್ಧ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ. ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಹತ್ತು ವರ್ಷಗಳ ಹಿಂದೆ ಬಿಡುಗಡೆಯಾದ 2 ಕೋಟಿ ರೂ. ಅನುದಾನದಲ್ಲಿ 1.25 ಕೋಟಿ ಹಣ ಗುಳುಂ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ನಾನು ನೇಮಕಗೊಂಡ ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಯಡಿಯೂರಪ್ಪ ಕಾಲದಲ್ಲಿ 2 ಕೋಟಿ ಅನುದಾನವನ್ನು ಬಜೆಟ್​​ನಲ್ಲಿ ಇಟ್ಟಿದ್ದರು. ಆದ್ರೆ ಅದು ಡಿಸಿಯವರಿಂದ ನೇರವಾಗಿ ಬರಲಿಲ್ಲ ಎಂದು ಹೇಳಿದ್ದಾರೆ.

ಗುತ್ತಿಗೆದಾರರು ಮಠದ ಪೂರ್ಣ ಕೆಲಸ ಮುಗಿಸಿದರೂ ಇದುವರೆಗೆ ಮುಕ್ಕಾಲು ಭಾಗ ಹಣ ಬಂದಿಲ್ಲ. ಕೇವಲ 75 ಲಕ್ಷ ಬಂದಿದೆ. ಉಳಿದ 1.25 ಕೋಟಿ ಹಣ ಎಲ್ಲಿಗೆ ಹೋಯ್ತು ಎಂದು ಪ್ರಶ್ನೆ ಮಾಡಿದ್ದಾರೆ. ಆ ಪ್ರತಿಷ್ಠಿತ ಮಠಾಧೀಶರಿಗೆ ಡಿಸಿಯವರಿಂದ ನೇರವಾಗಿ ಹಣ ಹೋಗುವುದಾದರೆ ಶಿರಹಟ್ಟಿ ಮಠಕ್ಕೆ ಈ ಅನ್ಯಾಯ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಉತ್ತರ ಕರ್ನಾಟಕದ ಮಠಗಳಿಗೆ ಸರ್ಕಾರದಿಂದ ಅನ್ಯಾಯವಾಗಿದೆ. ಉತ್ತರ ಕರ್ನಾಟಕದ ಶಾಸಕರೊಬ್ಬರು ಸದಾಕಾಲ ಸರ್ಕಾರದ ವಿರುದ್ಧ ಯಡಿಯೂರಪ್ಪ ವಿರುದ್ಧ ಮಾತನಾಡ್ತಾನೇ ಇದ್ರು. ಸ್ವಪಕ್ಷದ ಶಾಸಕರೊಬ್ಬರು ತಮ್ಮ ಸರ್ಕಾರದ ವಿರುದ್ಧ ತಮ್ಮ ನಾಯಕನ ವಿರುದ್ಧ ಮಾತನಾಡುವಾಗ ತುಟಿಕ್ ಪಿಟಿಕ್ ಅನ್ನದೇ, ಈಗ ನನ್ನ ವಿರುದ್ಧ ಹರಿಹಾಯ್ತಿದ್ದಾರೆ. ಅಂದು ಒಬ್ಬರೂ ಕೂಡ ಮಾತನಾಡದೇ ಇವತ್ತು ನನ್ನ ವಿರುದ್ಧ ಇಲ್ಲಸಲ್ಲದ ಮಾತುಗಳನ್ನಾಡ್ತಿದ್ದೀರಿ ಎಂದು ಕಿಡಿಕಾರಿದರು.

ಇದನ್ನೂ ಓದಿ: 'ನನ್ನದು ಅಳಿಲು ಸೇವೆ ಮಾತ್ರ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ': ಸಿಎಂಗೆ ಬಿಎಸ್​ವೈ ಪತ್ರ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.