ಗದಗ: ದೇಶದಲ್ಲಿ ಕಾಂಗ್ರೆಸ್ನ ಪರಿಸ್ಥಿತಿ ವಾರಸುದಾರಿಲ್ಲದ ಮನೆಯಂತಾಗಿದೆ ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅವಸಾನದ ಅಂಚಿಗೆ ತಲುಪಿದೆ. ಕಾಂಗ್ರೆಸ್ ವಾರಸುದಾರರಿಲ್ಲದ ಮನೆಯಂತಾಗಿದೆ. ಕಾಂಗ್ರೆಸ್ ಲೀಡರ್ ಲೆಸ್ ಪಾರ್ಟಿಯಾಗಿದೆ. ಮುಖ್ಯಮಂತ್ರಿ ಗಾದಿಗಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ದಿನಾಲೂ ಕನಸು ಕಾಣುತ್ತಿದ್ದಾರೆ ಎಂದರು.
ಓದಿ: ‘ಆ ಎಸಿ ನನಗೆ 3 ಕೋಟಿ ರೂ.ಗೆ ಆಫರ್ ಕೊಟ್ಟಿದ್ದರು’.. ಸಿ ಪಿ ಯೋಗೇಶ್ವರ್ ವಿರುದ್ಧ ಹೆಚ್ಡಿಕೆ ವಾಗ್ದಾಳಿ
ದೇಶದಲ್ಲಿ ರಾಹುಲ್ ಗಾಂಧಿ ನೂರಕ್ಕೆ ನೂರು ಪ್ರಧಾನ ಮಂತ್ರಿ ಆಗಲ್ಲ. ರಾಜ್ಯದಲ್ಲಿ ಕಾಂಗ್ರೆಸ್ನ ಯಾವುದೇ ನಾಯಕರು ಮುಖ್ಯಮಂತ್ರಿ ಆಗಲು ಸಾಧ್ಯವೇ ಇಲ್ಲ ಎಂದು ವ್ಯಂಗ್ಯವಾಡಿದರು.