ಗದಗ : ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಈ ಬಾರಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಅಷ್ಟಾಗಿ ಕಂಡುಬಂದಿಲ್ಲ. ಈಗಾಗಲೇ ನಮ್ಮ ಸರ್ಕಾರ ಬಡ ಕುಟುಂಬಗಳಿಗೆ ಬಲ ತುಂಬುವ ಕೆಲಸ ಮಾಡಿದ್ದರಿಂದ ಸಂಖ್ಯೆ ಕಡಿಮೆ ಆಗಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, "ದವಸ ಧಾನ್ಯ ಕೊಡುವುದು, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಯಿಂದಾಗಿ ಪ್ರಶ್ನೆ ಉದ್ಭವಿಸಲ್ಲ. ತೊಂದರೆಯಲ್ಲಿರುವ ಬಡ ಕುಟುಂಬಗಳು ಸರ್ಕಾರದ ಯೋಜನೆಯಿಂದ ತೃಪ್ತಿಕರ ಜೀವನ ನಡೆಸುತ್ತಿವೆ" ಎಂದರು.
ಲೋಡ್ ಶೆಡ್ಡಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿ, "ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಇದೆ ಅಂತಾ ಕೇಳಿದ್ದೇನೆ. ಪೀಕ್ ಅವರ್ನಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಇದೆ. ಎರಡ್ಮೂರು ದಿನದಲ್ಲಿ ಸಮಸ್ಯೆ ಬಗೆಹರಿಯುತ್ತದೆ. ಇಂಡಸ್ಟ್ರಿಗಳಿಗೆ ಈ ಒಂದು ವಾರದಲ್ಲಿ ಸಮಸ್ಯೆಯಾಗಿದೆ. ಡ್ಯಾಂ ಭರ್ತಿಯಾಗಿವೆ. ಜಲ ವಿದ್ಯುತ್ ಸ್ಥಾವರಗಳು ಕೆಲಸ ಮಾಡುತ್ತಿವೆ. ರಾಯಚೂರಿನಲ್ಲಿ ನಾಲ್ಕು ಘಟಕ ಕಾರ್ಯಾರಂಭ ಮಾಡಿವೆ" ಎಂದು ಮಾಹಿತಿ ನೀಡಿದರು.
ಪಂಚ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ಹೋರಾಟದ ಕುರಿತು ಮಾತನಾಡಿ, ಜನರಿಗೆ ಸವಲತ್ತು ಕೊಡಬಾರದಾ?, ಯೋಜನೆಗಳು ಜನರಿಗೆ ಉಪಯೋಗ ಆಗಿಲ್ಲವೇ?, ಸಾಮಾನ್ಯ ಜನರಿಗೆ ಇನ್ನೂ ಹೆಚ್ಚು ಶಕ್ತಿ ತುಂಬುವ ಕೆಲಸವಾಗಿದೆ. ಗ್ಯಾರಂಟಿ ಕೊಟ್ಟಿದ್ದಕ್ಕೆ ಬಿಜೆಪಿ ಹೋರಾಟ ಮಾಡುತ್ತಾರಾ?, ಕೊಡಬೇಡಿ ಅಂತಾ ಪ್ರತಿಭಟನೆ ಮಾಡುತ್ತಾರಾ?. ಅವರ ಹಾಗೆ ನಾವು ಸರ್ಕಾರ ನಡೆಸಬೇಕಾ? ಎಂದು ಪ್ರಶ್ನೆ ಮಾಡಿದರು. ಬಳಿಕ, ನಮ್ಮದು ಜನಪರ ಸರ್ಕಾರ. ಗ್ಯಾರಂಟಿ ಯೋಜನೆ ಕೊಡುವ ಮೂಲಕ ಬಡವರ ಬದುಕಿನಲ್ಲಿ ಶಾಂತಿ ಮೂಡಿಸುವ ಕೆಲಸ ಮಾಡಿದ್ದೇವೆ. ಜನರಿಗೆ ಕೊಟ್ಟ ಮಾತು ಈಡೇರಿಸುತ್ತೇವೆ. ಸಣ್ಣಪುಟ್ಟ ತೊಂದರೆ ಆಗಿದ್ರೆ ಹೇಳಲಿ, ಸರಿ ಮಾಡೋಣ ಎಂದರು.
ಇದನ್ನೂ ಓದಿ : ಸರ್ಕಾರಕ್ಕೆ ನೂರು ದಿನದ ಸಂಭ್ರಮ : ಪಂಚ ಗ್ಯಾರಂಟಿಗಳ ಅನುಷ್ಠಾನದ ಜೊತೆ ಪಂಚ ಹಗರಣಗಳ ತನಿಖೆಗೆ ಸಮಿತಿ ರಚಿಸಿ ಬಿಜೆಪಿಗೆ ಟಕ್ಕರ್
ಬಿಜೆಪಿಗೆ ಭಯ ಶುರುವಾಗಿದೆ. ಇನ್ನೂ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಲಾಗಿಲ್ಲ. ಅವರ ಪಕ್ಷದಲ್ಲಿ ಎಷ್ಟೋ ಜನರಿಗೆ ಅಸಮಾಧಾನವಾಗಿದೆ. ಸರ್ಕಾರ ಅಧಿಕಾರದಲ್ಲಿದ್ದಾಗ ಜನರಿಗೆ ಏನೂ ಮಾಡ್ಲಿಲ್ಲ ಅಂತಾ ಅವರ ಮಾಜಿ ಶಾಸಕರೇ ಹೇಳ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಸಿದ್ದರಾಮಯ್ಯ ಸರ್ಕಾರಕ್ಕೆ ಶತದಿನದ ಸಂಭ್ರಮ.. ಪಂಚ ಗ್ಯಾರಂಟಿ ಕೇಂದ್ರಿತ ಆಡಳಿತದಲ್ಲಿ ಕರ್ನಾಟಕ ಮಾದರಿ ಮಂತ್ರ
ಬರ ಘೋಷಣೆ ಬಗ್ಗೆ ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರೆ, ವಿಚಾರ ಮಾಡಿ ವರದಿ ತರಿಸಿಕೊಂಡಿದ್ದಾರೆ. ದೇವರ ದಯೆಯಿಂದ ಕಳೆದ 2 ದಿನದಿಂದ ಉತ್ತಮ ಮಳೆಯಾಗುತ್ತಿದೆ. 7ನೇ ತಾರೀಖು ಕ್ಯಾಬಿನೆಟ್ ಮೀಟಿಂಗ್ ಕರೆದಿದ್ದಾರೆ ಎಂದರು.
ಇದನ್ನೂ ಓದಿ : ಸಿದ್ದರಾಮಯ್ಯ ಸರ್ಕಾರದ ' ಶತಕ 'ದಾಟ : ಗ್ಯಾರಂಟಿಗಳ ಜಾರಿಗೆ ಪಂಚ ಸವಾಲು