ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಕರುವಿನ ಮೇಲೆ ಚಿರತೆ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಎರಡು ದಿನಗಳ ಹಿಂದೆ ಜಮೀನಿನ ಶೆಡ್ನಲ್ಲಿ ಕಟ್ಟಿದ್ದ ಕರುವಿನ ಮೇಲೆ ದಾಳಿ ಮಾಡಿದ್ದ ಚಿರತೆ ಮತ್ತೆ ನಿನ್ನೆ ತಡ ರಾತ್ರಿ ಬಂದು ಕರುವನ್ನು ತಿಂದು ಹೋಗಿದೆ ಎನ್ನಲಾಗಿದೆ.
ಈ ಅನುಮಾನಕ್ಕೆ ಪುಷ್ಠಿ ನೀಡುವಂತೆ ಜಮೀನುಗಳಲ್ಲಿ ಚಿರತೆ ಹೆಜ್ಜೆಗಳು ಕಾಣಿಸಿಕೊಂಡಿವೆ. ಹಾಗಾಗಿ ಕಪ್ಪತ್ತಗುಡ್ಡ ಭಾಗದ ಜನರು ಮತ್ತೆ ಭಯಭೀತರಾಗಿದ್ದಾರೆ. ಕಳೆದ ಬಾರಿಯೂ ಚಿರತೆ ಪ್ರತ್ಯಕ್ಷವಾಗಿತ್ತು. ಈಗ ಮತ್ತೆ ಕಾಣಿಸಿಕೊಂಡು ಆತಂಕ ಹೆಚ್ಚಿಸಿದೆ.
ಇದನ್ನೂ ಓದಿ:ಒಂದು ಕೋಣಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮೂರು ಹಳ್ಳಿಯ ಜನ!