ಗದಗ: ಕೊರೊನಾ ಸೋಂಕಿಗೊಳಗಾಗಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಬೇಗ ಗುಣಮುಖರಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹಾರೈಸಿದ್ದಾರೆ.
![Cc patil tweet](https://etvbharatimages.akamaized.net/etvbharat/prod-images/03:46:15:1596536175_kn-gdg-03-cc-patil-tweet-7203292_04082020132109_0408f_1596527469_1092.jpg)
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಪಾತ್ರ ಬಹಳ ಮುಖ್ಯ. ಕೊರೊನಾದಂತಹ ಸಂದಿಗ್ಧ ಸನ್ನಿವೇಶದಲ್ಲಿ ಸಕಾರಾತ್ಮಕ ಸಲಹೆ ಸೂಚನೆ ನೀಡುವುದರ ಮೂಲಕ ಸಹಕಾರ ನೀಡಿರುವ ಸಿದ್ದರಾಮಯ್ಯನವರು ಬೇಗ ಗುಣಮುರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ. ಜೊತೆಗೆ ಬೇಗ ಮರಳಿ ಆಡಳಿತಾತ್ಮಕ ಸಲಹೆ ನೀಡಲೆಂದು ಆಶಿಸುವೆ ಎಂದು ಟ್ವೀಟ್ ಮಾಡಿದ್ದಾರೆ.