ಗದಗ: ಲಾರಿ-ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಗದಗ ತಾಲೂಕಿನ ಹುಲಕೋಟಿ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಪ್ರೇಮ ಈಶ್ವರಗೌಡ ಪಾಟೀಲ್(55) ಹಾಗೂ ಕಾರು ಚಾಲಕ ಅನ್ವರ್ ಎಂದು ಗುರುತಿಸಲಾಗಿದೆ. ಈಶ್ವರಗೌಡ ರುದ್ರಗೌಡ ಪಾಟೀಲ್, ಶಿವಾಬಾಯಿ ಮೇಲಗಿರಿಗೌಡ ಪಾಟೀಲ್, ಮಹಾರಾಜ ಮೇಲಗಿರಿಗೌಡ ಪಾಟೀಲ್ ಎಂಬುವರಿಗೆ ಗಾಯಾಳುಗಳಾಗಿದ್ದು, ಇವರಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಟಾಟಾ ಆಲ್ಟ್ರೋಜ್!
ಇವರು ಮೂಲತಃ ರೋಣ ತಾಲೂಕಿನ ಮಾಳವಾಡ ಗ್ರಾಮದವರಾಗಿದ್ದು, ಧಾರವಾಡದಲ್ಲಿ ನೆಲೆಸಿದ್ದಾರೆ. ಇಂದು ಸ್ವಗ್ರಾಮ ಮಾಳವಾಡದಲ್ಲಿ ತಮ್ಮ ಜಮೀನಿಗೆ ಭೇಟಿ ನೀಡಿ ವಾಪಸ್ ತೆರಳುತ್ತಿದ್ದ ವೇಳೆ ಹುಲಕೋಟಿ ಗ್ರಾಮದ ಬಳಿಯಿರುವ ರೂರಲ್ ಇಂಜಿನಿಯರಿಂಗ್ ಕಾಲೇಜು ಸಮೀಪ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.