ETV Bharat / state

ಬಿಎಸ್​ವೈ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರವಾಗಿದೆ: ಸಿ.ಸಿ ಪಾಟೀಲ್​​ - ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್

ಕೇಂದ್ರ ನಾಯಕರು ಸಹ ಬಿಎಸ್​ವೈ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಕೊರೊನಾ ವಿಷಯದಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತಿದೆ ಎಂದು ಸಚಿವ ಸಿ.ಸಿ ಪಾಟೀಲ್ ಹೇಳಿದ್ದಾರೆ.

CC Patil
ಬಿಎಸ್​ವೈ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರವಾಗಿದೆ: ಸಿ.ಸಿ ಪಾಟೀಲ
author img

By

Published : Jun 1, 2020, 4:23 PM IST

ಗದಗ: ಬಿಎಸ್​ವೈ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರವಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ ಪಾಟೀಲ್ ಹೇಳಿದ್ದಾರೆ.

ಗದಗ ನಗರದ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ನಮ್ಮ ಹಿರಿಯ ಶಾಸಕ ಮಿತ್ರರು ನಮ್ಮ ಭಿನ್ನಮತ ಇಲ್ಲ ಎಂದು ಸೃಷ್ಟಪಡಿಸಿದ್ದಾರೆ. ಕೇಂದ್ರ ನಾಯಕರು ಸಹ ಬಿಎಸ್​ವೈ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ, ಕೊರೊನಾ ವಿಷಯದಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಬಿಎಸ್​ವೈ ಸರ್ಕಾರ ಅಬಾಧಿತ ಎಂದರು.

ಇನ್ನು ಉಮೇಶ ಕತ್ತಿ ನನ್ನ ಆತ್ಮೀಯ ಸ್ನೇಹಿತರು ಹಾಗೂ ಹಿರಿಯ ಶಾಸಕರು. ನಾನು ಕೂಡಾ ಮೂಲತಃ ಬೆಳಗಾವಿ ಜಿಲ್ಲೆಯವ ಹಾಗಾಗಿ ಸದಾಭಿಪ್ರಾಯ ಇದೆ. ಆದ್ರೆ ಭಿನ್ನಮತಕ್ಕೆ ಅಲ್ಲಾ ಎಂದು ಸೃಷ್ಟಪಡಿಸಿದ್ರು. ಏನಾದರೂ ಸಮಸ್ಯೆ ಇದ್ರೆ ಸಿಎಂ ಜೊತೆಗೆ ಕುಳಿತು ಬಗೆ ಹರಿಸಿಕೊಳ್ಳುತ್ತಾರೆ. ಯಾರು ಏನ್ನು ಚಿಂತೆ ಮಾಡುವ ಅಗತ್ಯ ಇಲ್ಲ, ಸರ್ಕಾರ ಸುಭದ್ರವಾಗಿದ್ದು, ಮುಂದಿನ ಅವಧಿಗೆ ಭಾರತೀಯ ಜನತಾ ಪಕ್ಷವನ್ನು ಬಿಎಸ್​ವೈ ಅಧಿಕಾರಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸತೀಶ್ ಜಾರಕಿಕೊಳಿ ನಮ್ಮ ಪಕ್ಷದವರೇ ಅಲ್ಲಾ, ಅವರು ಕಾಂಗ್ರೆಸ್ ಕುರಿತು ವಿಚಾರ ಮಾಡಲಿ, ಕಾಂಗ್ರೆಸ್​ನ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಅವರ ಸಂಬಂಧದ ಕುರಿತು ಸತೀಶ ಜಾರಕಿಹೊಳಿ ವಿಚಾರ ಮಾಡಲಿ. ಅವರ ಅವರ ಅಭಿಪ್ರಾಯ ಹೇಳ್ತಾರೆ ಅದಕ್ಕೆ ನಾನು ಹೆಚ್ಚಿಗೆ ಏನು ಹೇಳೋದಿಲ್ಲ ಎಂದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.