ETV Bharat / state

ರಕ್ತ ಗುಂಪು ಅದಲು ಬದಲು ಮಾಡಿ ವೈದ್ಯರ ಎಡವಟ್ಟು ಆರೋಪ: 21 ವರ್ಷದ ವಿಕಲಚೇತನೆ ಸಾವು - ಗದಗದಲ್ಲಿ ಯುವತಿ ಸಾವು

ರಕ್ತದ ಗುಂಪು ಅದಲು ಬದಲಾದ ಕಾರಣ ಯುವತಿ ಮೃತಪಟ್ಟಿದ್ದಾಳೆ ಎಂದು ಪೋಷಕರು ದೂರುತ್ತಿದ್ದಾರೆ. ಆದರೆ ವೈದ್ಯರು ಆಕೆ ತೀವ್ರ ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

blood group miss match young girl death in gadaga
ರಕ್ತ ಗುಂಪು ಅದಲು ಬದಲು ಮಾಡಿ ವೈದ್ಯರ ಯಡವಟ್ಟು ಆರೋಪ
author img

By

Published : Jun 6, 2022, 9:52 PM IST

ಗದಗ : ರಕ್ತದ ಗುಂಪು ಅದಲು ಬದಲಾಗಿ ಯುವತಿ ಮರಣ ಹೊಂದಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ದೂರುತ್ತಿದ್ದಾರೆ. ಗದಗ ತಾಲೂಕಿನ ಹರ್ಲಾಪೂರ ಗ್ರಾಮದ ಜೀವನ್ ಸಾಬ್ ಮತ್ತು ಹಮಿದಾಬೇಗಂ ಎಂಬ ದಂಪತಿಯ 21 ವರ್ಷದ ಮೈಮುನ್ ತಬಸುಬ್ ಮೃತ ಹೊಂದಿದ ಯುವತಿ.

ಅನಾರೋಗ್ಯದ ಹಿನ್ನೆಲೆಯಲ್ಲಿ ಮೈಮುನ್​ಳನ್ನು ಗದಗದ ಜರ್ಮನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರು ರಕ್ತ ಹಾಕಿಸಬೇಕು ಎಂದು ಸಲಹೆ ನೀಡಿದ್ದರು. ಅದರಂತೆ ರಕ್ತನಿಧಿಯಿಂದ ತಂದು ರಕ್ತ ಕೊಟ್ಟ ಕೆಲವೇ ನಿಮಿಷದಲ್ಲಿ ಮಗಳು ಮರಣಹೊಂದಿದ್ದಾಳೆ. ವೈದ್ಯರು ಬೇರೆ ಗುಂಪಿನ ರಕ್ತ ಕೊಟ್ಟಿದ್ದರಿಂದ ಮೃತ ಪಟ್ಟಿದ್ದಾಳೆ ಎಂದು ವೈದ್ಯರ ವಿರುದ್ಧ ಮೃತಳ ಪೋಷಕರು ಆರೋಪಿಸುತ್ತಿದ್ದಾರೆ. ಅಲ್ಲದೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ರಕ್ತ ಗುಂಪು ಅದಲು ಬದಲು ಮಾಡಿ ವೈದ್ಯರ ಎಡವಟ್ಟು ಆರೋಪ

ಆದರೆ ವೈದ್ಯರು ಈ ಆರೋಪವನ್ನು ಅಲ್ಲಗಳೆದಿದ್ದು ಆಕೆಗೆ ಎ ಪಾಸಿಟಿವ್​ ರಕ್ತವನ್ನು ಎರಡು ಬಾರಿ ನೀಡಲಾಗಿದೆ. ಆಕೆಗೆ ತೀವ್ರ ಅನಾರೋಗ್ಯ ಇದ್ದ ಕಾರಣ ಮರಣ ಹೊಂದಿದ್ದಾಳೆ ಎಂದು ಹೇಳುತ್ತಿದ್ದಾರೆ. ಯುವತಿಗೆ ತೀವ್ರತರದಲ್ಲಿ ಜ್ವರ ಕಾಣಿಸಿಕೊಂಡಿತ್ತು. ದಾಖಲಿಸಿಕೊಳ್ಳುವಾಗಲೇ ಬದುಕೋದು ಕಷ್ಟ ಇದೆ ಅಂತ ಹೇಳಿದ್ದೆವು. ಜೊತೆಗೆ ಯುವತಿ ತಂದೆ ಸಹ ಸಹಿ ಹಾಕಿದ್ದರು. ಈಗ ನಮ್ಮ ಚಿಕಿತ್ಸೆ ಫಲಕಾರಿಯಾಗಿಲ್ಲ, ಹೀಗಾಗಿ ಸಾವನ್ನಪ್ಪಿದ್ದಾಳೆ. ಆದರೆ ಇವರು ಆರೋಪ ಮಾಡುತ್ತಿರುವುದು ಸುಳ್ಳು ಎನ್ನುತ್ತಿದ್ದಾರೆ.

ಇದನ್ನೂ ಓದಿ: ವಿಧಾನ ಪರಿಷತ್​​​ ಸದಸ್ಯರಾದ ಡಿ.ತಿಮ್ಮಯ್ಯ, ಎನ್. ಮಂಜೇಗೌಡರಿಗೆ ಹೈಕೋರ್ಟ್ ನಿಂದ ಸಮನ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.