ಧಾರವಾಡ/ಹುಬ್ಬಳ್ಳಿ/ಗದಗ : ಧಾರವಾಡದ ಸಶಸ್ತ್ರ ಮೀಸಲು ಪಡೆಯಿಂದ ಆಯುಧ ಪೂಜೆ ನೆರವೇರಿಸಲಾಯಿತು. ಸಶಸ್ತ್ರ ಮೀಸಲು ಪಡೆ ಕಚೇರಿಯಲ್ಲಿ ಪೊಲೀಸ್ ಸಿಬ್ಬಂದಿ ಆಯುಧ ಪೂಜೆ ನೆರವೇರಿಸಿದರು.
ವಾಹನಗಳು, ರಿವಾಲ್ವಾರ್, ಬಂದೂಕು, ಸೇರಿದಂತೆ ಸಶಸ್ತ್ರ ಮೀಸಲು ಪಡೆ ಆಯುಧಗಳನ್ನು ಅಲಂಕಾರಗೊಳಿಸಿ ಪೂಜೆ ಮಾಡಿದರು. ಪೊಲೀಸ್ ಸಿಬ್ಬಂದಿ ಬಿಳಿ ಪಂಚೆ ಮತ್ತು ಬಿಳಿ ಶರ್ಟ್ ಧರಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಆಯುಧ ಪೂಜೆ ಸಂಭ್ರಮ : ದಸರಾ ಹಬ್ಬದ ಪ್ರಯುಕ್ತ ನಗರದ ಉಪನಗರ ಠಾಣೆಯಲ್ಲಿರುವ ರೈಫಲ್ ಗನ್, ಸರಪಣಿ, ಬೇಡಿ , ಲಾಠಿ ಹೀಗೆ ಅನೇಕ ಆಯುಧಗಳಿಗೆ ಪೂಜೆ ಮಾಡಲಾಯಿತು. ಪೂಜೆಯಲ್ಲಿ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.
ಗದಗ ಸಶಸ್ತ್ರ ಮೀಸಲು ಪಡೆ ಕಚೇರಿಯಲ್ಲಿ ಆಯುಧ ಪೂಜೆ : ಆಯುಧ ಪೂಜೆ ನಿಮಿತ್ತ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿಯಲ್ಲಿ ಪೂಜೆ ಆಯುಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೊರವಲಯದಲ್ಲಿರುವ ಮಲ್ಲಸಮುದ್ರ ಬಳಿಯ ಕಚೇರಿಯಲ್ಲಿ, ಪೊಲೀಸ್ ಸಿಬ್ಬಂದಿ ತಮಗೆ ನೀಡಿರುವ ವಿವಿಧ ಬಂದೂಕುಗಳು ಸೇರಿದಂತೆ ಕಚೇರಿಗೆ ಪೂಜೆ ಸಲ್ಲಿಸಿದರು. ಈ ಪೂಜಾ ಕಾರ್ಯಕ್ರಮದಲ್ಲಿ ಎಸ್ಪಿ ಶ್ರೀನಾಥ್ ಜೋಶಿ, ಡಿವೈಎಸ್ಪಿ ವಿಜಯ್ ಕುಮಾರ್ ಸೇರಿದಂತೆ ಗದಗ, ಬೆಟಗೇರಿ ಅವಳಿ ನಗರದಲ್ಲಿರುವ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.