ETV Bharat / state

ಗದಗದಲ್ಲಿ ಮತ್ತೆ ಮೂವರಿಗೆ ಕೊರೊನಾ ಪಾಸಿಟಿವ್​ - ಗದಗದಲ್ಲಿ ಮತ್ತೆ ಮೂವರಿಗೆ ಕೊರೊನಾ

ಕೊರೊನಾ ಮುಕ್ತವಾಗಿದ್ದ ಗದಗದಲ್ಲಿ ಮತ್ತೆ ಮೂವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. 36 ವರ್ಷದ ​P- 905, 61 ವರ್ಷದ P-912, 65 ವರ್ಷದ P -913ಗೆ ಕೊರೊನಾ ದೃಢಪಟ್ಟಿರೋದಾಗಿ​ ಡಿಸಿ ಎಂ‌.ಜಿ‌.ಹಿರೇಮಠ ಮಾಹಿತಿ ನೀಡಿದ್ದಾರೆ.

DC    M. G. Hiremath
ಡಿಸಿ ಎಂ‌. ಜಿ‌. ಹಿರೇಮಠ
author img

By

Published : May 12, 2020, 6:21 PM IST

ಗದಗ: ಕೊರೊನಾ ಮುಕ್ತವಾಗಿದ್ದ ಗದಗ ಜಿಲ್ಲೆಯಲ್ಲಿ ಮತ್ತೆ ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಎಂ‌.ಜಿ‌.ಹಿರೇಮಠ ಮಾಹಿತಿ ನೀಡಿದ್ದಾರೆ.

36 ವರ್ಷದ ​P- 905, 61 ವರ್ಷದ P-912, 65 ವರ್ಷದ P -913ಗೆ ಕೊರೊನಾ ದೃಢಪಟ್ಟಿರೋದಾಗಿ​ ಡಿಸಿ ಹಿರೇಮಠ ತಿಳಿಸಿದ್ದಾರೆ. 36 ವರ್ಷದ P-905 ಗುಜರಾತ್​ನ ಅಹದಾಬಾದ್​ನಲ್ಲಿ ತಬ್ಲಿಘಿ ಜಮಾತ್​ನಲ್ಲಿ ಭಾಗವಹಿಸಿದ್ದರು ಎಂದು ನಮೂದಾಗಿದ್ದು, ಜಿಲಾಧಿಕಾರಿಗಳ ಮಾಹಿತಿ ಅನ್ವಯ ನರಗುಂದ ಪಟ್ಟಣದ ನಿವಾಸಿ ಎಂದು ತಿಳಿದು ಬಂದಿದೆ. ಇನ್ನಿಬ್ಬರು 61 ವರ್ಷದ P-912 ಹಾಗೂ 65 ವರ್ಷದ P-913 ಗದಗದ ಗಂಜಿ ಬಸವೇಶ್ವರ ಓಣಿಯ ನಿವಾಸಿಗಳಾಗಿದ್ದು,‌ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ ಗಂಜಿ ಬಸವೇಶ್ವರ ಓಣೆಯ P- 514ಯ ದ್ವಿತೀಯ ಸಂಪರ್ಕದಲ್ಲಿ ಇದ್ದರು. ಇನ್ನು ಈ ಮೂವರರಿಗೆ ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇವರ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿ ಇರುವವರನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಅವರಿಗೆ ಗದಗದ ಜಿಮ್ಸ್​ನಲ್ಲಿ ಕ್ವಾರಂಟೈನ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ

ಈ ಮೊದಲು ಗದಗದಲ್ಲಿ ಒಟ್ಟು 5 ಪ್ರಕರಣಗಳು ದೃಢಪಟ್ಟಿದ್ದವು. ಅದರಲ್ಲಿ ಒರ್ವ ವೃದ್ಧೆ ಸಾವನ್ನಪ್ಪಿದ್ದು, 4 ಜನರು ಗುಣಮುಖರಾಗಿದ್ದರು. ಈ ನಡುವೆ ಕೊರೊನಾ ಮುಕ್ತವಾಗಿದ್ದ ಗದಗ ಜಿಲ್ಲೆಯಲ್ಲಿ ಮತ್ತೆ ಈ ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.