ETV Bharat / state

ಗದಗ: ಬೀದಿಗೆ ಬಿದ್ದ ತಾಯಿ-ಮಕ್ಕಳಿಗೆ ಆಶ್ರಯ ಕಲ್ಪಿಸಿದ ಪೊಲೀಸರು! - ಬೀದಿಗೆ ಬಿದ್ದ ತಾಯಿ-ಮಕ್ಕಳಿಗೆ ಆಶ್ರಯ ಕಲ್ಪಿಸಿದ ಆರಕ್ಷಕರು

ಗಂಡನ ಮನೆಯಿಂದ ಹೆಂಡತಿ-ಮಕ್ಕಳನ್ನು ಹೊರ ಹಾಕಿದ ಹಿನ್ನೆಲೆ ತುತ್ತು ಅನ್ನಕ್ಕಾಗಿ ಅವರು ಪರದಾಡಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಗದಗ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಸಿಬ್ಬಂದಿ ತಾಯಿ-ಮಕ್ಕಳನ್ನು ಉಪಚರಿಸಿ ಆಶ್ರಯ ಕಲ್ಪಿಸಿದ್ದಾರೆ.

gadag
ಬೀದಿಗೆ ಬಿದ್ದ ತಾಯಿ-ಮಕ್ಕಳಿಗೆ ಆಶ್ರಯ ಕಲ್ಪಿಸಿದ ಆರಕ್ಷಕರು
author img

By

Published : Apr 22, 2020, 4:45 PM IST

ಗದಗ: ಲಾಕ್​ಡೌನ್​ ಸಮಯದಲ್ಲೇ ಗಂಡನ ಮನೆಯಿಂದ ಹೆಂಡತಿ-ಮಕ್ಕಳನ್ನು ಹೊರ ಹಾಕಿದ ಹಿನ್ನೆಲೆ ತುತ್ತು ಅನ್ನಕ್ಕಾಗಿ ಅವರು ಪರದಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಬೀದಿಗೆ ಬಿದ್ದ ತಾಯಿ-ಮಕ್ಕಳಿಗೆ ಆಶ್ರಯ ಕಲ್ಪಿಸಿದ ಪೊಲೀಸರು

ಬಳ್ಳಾರಿ ಜಿಲ್ಲೆಯ ಕಂಪ್ಲಿ ಮೂಲದ ಅನಂತಮ್ಮ ಹಾಗೂ ಮಕ್ಕಳನ್ನು ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿರುವ ಆಕೆಯ ಗಂಡನ ಮನೆಯವರು ಹೊರ ಹಾಕಿದ್ದಾರಂತೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಮುಳಗುಂದ ನಾಕಾ ಬೀದಿಯಲ್ಲಿ ನಾಲ್ಕು ದಿನ‌ಗಳಿಂದ ತಾಯಿ-ಮಕ್ಕಳು ದಿನ ಕಳೆಯುತ್ತಿದ್ದರು. ಇದನ್ನು ನೋಡಿದ ಪೊಲೀಸರು ಅವರಿಗೆ ಊಟ, ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

ಗದಗ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಸಿಬ್ಬಂದಿ, ಬೀದಿಯಲ್ಲಿ ಪರದಾಡುತ್ತಿರುವ ತಾಯಿ-ಮಕ್ಕಳನ್ನು ಉಪಚರಿಸಿ ಪೊಲೀಸ್​ ವಾಹನದಲ್ಲಿ ಕರೆದೊಯ್ದು ವಾಲ್ಮೀಕಿ ಭವನಕ್ಕೆ ತಲುಪಿಸಿದ್ದಾರೆ. ಸದ್ಯ ಅಲ್ಲಿಯೇ ಆಶ್ರಯ ಕಲ್ಪಿಸಲಾಗಿದೆ. ಇನ್ನು ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.