ETV Bharat / state

ಓವರ್​ಟೇಕ್​ ಮಾಡಲು ಹೋಗಿ ಮರಕ್ಕೆ ಗುದ್ದಿದ ಕಾರು.. ಮೂವರು ಸಾವು, ಓರ್ವನ ಸ್ಥಿತಿ ಗಂಭೀರ

author img

By

Published : Mar 19, 2022, 7:21 PM IST

Updated : Mar 19, 2022, 8:12 PM IST

ಘಟನಾ ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮುಲ್ಲಾ ಎಂಬಾತನನ್ನು ಗದಗ ಜಿಮ್ಸ್​ ಆಸ್ಪತ್ರೆಗೆ ರವಾನಿಸಲಾಗಿದೆ. ಈತನ ಸ್ಥಿತಿ ಚಿಂತಾಜನಕವಾಗಿದೆ..

car
ಕಾರು

ಗದಗ : ಲಾರಿಯನ್ನು ಓವರ್​ಟೇಕ್​ ಮಾಡಲು ಹೋದ ಕಾರೊಂದು ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊರವಲಯದಲ್ಲಿ ನಡೆದಿದೆ.

ಓವರ್​ಟೇಕ್​ ಮಾಡಲು ಹೋಗಿ ಮರಕ್ಕೆ ಗುದ್ದಿದ ಕಾರು

ಮೃತರಲ್ಲಿ ಒಬ್ಬರ ಹೆಸರು ದರ್ಶನ್ ಎಂದು ತಿಳಿದು ಬಂದಿದೆ. ಇನ್ನಿಬ್ಬರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಎಲ್ಲರೂ ಗದಗ ನಗರದವರು ಎಂದು ಹೇಳಲಾಗಿದೆ. ಉಳಿದವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕಾರು ಮರಕ್ಕೆ ಡಿಕ್ಕಿಯಾಗಿ ಹೊತ್ತಿ ಉರಿಯುತ್ತಿದ್ದನ್ನು ಕಂಡ ಲಾರಿ ಚಾಲಕ ನಾಲ್ವರನ್ನೂ ಕಾರಿನಿಂದ ಹೊರಗೆಳೆದಿದ್ದಾನೆ. ಓವರ್​ಟೇಕ್​ ಮಾಡಲು ಹೋಗಿ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮುಲ್ಲಾ ಎಂಬಾತನನ್ನು ಗದಗ ಜಿಮ್ಸ್​ ಆಸ್ಪತ್ರೆಗೆ ರವಾನಿಸಲಾಗಿದೆ. ಈತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಓದಿ: ಹೋಳಿ ಸಂಭ್ರಮದಲ್ಲಿ ಕಂಠಪೂರ್ತಿ ಕುಡಿದು ಡ್ಯಾನ್ಸ್​​.. ತನ್ನಷ್ಟಕ್ಕೆ ತಾನೇ ಚಾಕುವಿನಿಂದ ಇರಿದುಕೊಂಡು ಸಾವು

Last Updated : Mar 19, 2022, 8:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.