ಗದಗ: ಜಿಲ್ಲಾ ಪೊಲೀಸ್ ಕಚೇರಿಯ ಸೈಬರ್ ಅಪರಾಧ ವಿಭಾಗದ ಮೂವರು ಸೇರಿದಂತೆ 7 ಸಿಬ್ಬಂದಿಗೆ ಕೊರೊನಾ ವಕ್ಕರಿಸಿಕೊಂಡಿದ್ದು, ಮೂರು ಪೊಲೀಸ್ ಠಾಣೆಗಳನ್ನು ಸೀಲ್ಡೌನ್ ಮಾಡಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಸ್ಯಾನಿಟೈಸ್ ಮಾಡಲಾಗಿದ್ದು, ಕಂಟ್ರೋಲ್ ರೂಮ್ ಸಿಬ್ಬಂದಿ ಹೊರತುಪಡಿಸಿ ಉಳಿದ ಸಿಬ್ಬಂದಿಗೆ ಕಚೇರಿ ಪ್ರವೇಶ ನಿರ್ಬಂಧಿಸಲಾಗಿದೆ. ಸೈಬರ್ ಅಪರಾಧ ವಿಭಾಗದ ಮೂವರಿಗೆ, ಬೆಟಗೇರಿ ಠಾಣೆಯ ಇಬ್ಬರಿಗೆ, ಶಹರ ಮತ್ತು ಸಂಚಾರಿ ಪೊಲೀಸ್ ಠಾಣೆಯ ತಲಾ ಒಬ್ಬರು ಕಾನ್ಸ್ಟೇಬಲ್ಗೆ ಕೊರೊನಾ ಸೋಂಕು ತಗುಲಿದೆ.
ಹೀಗಾಗಿ, ಸಂಚಾರಿ ಪೊಲೀಸ್ ಠಾಣೆಯನ್ನು ಪೊಲೀಸ್ ಕಲ್ಯಾಣ ಮಂಟಪಕ್ಕೆ, ಶಹರ ಪೊಲೀಸ್ ಠಾಣೆಯನ್ನು ರಾಜೀವ್ಗಾಂಧಿ ನಗರ ಠಾಣೆಗೆ ಹಾಗೂ ಬೆಟಗೇರಿ ಪೊಲೀಸ್ ಠಾಣೆಯನ್ನು ಹೆಲ್ತ್ ಕ್ಯಾಂಪ್ ಸಮೀಪದ ಪೊಲೀಸ್ ಕ್ಯಾಂಟೀನ್ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.
ನಾನು ಸುರಕ್ಷಿತವಾಗಿದ್ದೇನೆ. ನಮ್ಮೆಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದರೆ ಸಾಕು. ಸೋಂಕಿತ ಸಿಬ್ಬಂದಿ ಶೀಘ್ರ ಗುಣಮುಖರಾಗಲಿ. ಅವರ ಸಂಪರ್ಕದಲ್ಲಿ ಇರುವವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಎಸ್ಪಿ ಯತೀಶ್ ಹೇಳಿದರು.