ಧಾರವಾಡ: ಚರಂಡಿ ಒಳಗೆ ಬಿದ್ದು ಒದ್ದಾಡುತ್ತಿದ್ದ ಕರುವನ್ನು ಯುವಕರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಇಲ್ಲಿನ ಸಾಧನೆಕೇರಿ ಪವನ್ ಪಾರ್ಕ್ ಬಳಿ ಚರಂಡಿಯಲ್ಲಿ ಬಿದ್ದು ಒದ್ದಾಡುತ್ತಿದ ಕರುವನ್ನು ಪವನ್ ಪಾರ್ಕ್ ಯುವಕ ಮಂಡಳಿ ಸದಸ್ಯರು ರಕ್ಷಿಸಿದ್ದಾರೆ.
ಬಹಳ ಸಮಯದಿಂದ ಚರಂಡಿಯಲ್ಲಿ ಬಿದ್ದು ಕೂಗುತ್ತಿದ್ದ ಕರುವನ್ನು ಗಮನಿಸಿದ ಯುವಕರು ಹರಸಾಹಸ ಪಟ್ಟು ರಕ್ಷಿಸಿ, ಸುರಕ್ಷಿತವಾಗಿ ತಾಯಿ ಹಸುವಿನೊಂದಿಗೆ ಸೇರಿಸಿದ್ದಾರೆ.