ಹುಬ್ಬಳ್ಳಿ: ಅಕಾಲಿಕೆ ಮಳೆಯಿಂದ ಜಿಲ್ಲೆಯಲ್ಲಿ ಬೆಳೆ ನೆಲಕಚ್ಚಿದೆ. ಅಳಿದುಳಿದಿರುವ ಬೆಳೆಗೆ ಸರಿಯಾದ ಬೆಲೆ ಸಿಗದ ಹತಾಶೆಯಿಂದ ಯುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ.
ನವೆಂಬರ್ ತಿಂಗಳಿನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುಮಾರು 14 ಯುವ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋವಿಡ್ ಶುರುವಾದ ಬಳಿಕ ಸಾಕಷ್ಟು ಯುವಕರು ಕೃಷಿಯತ್ತ ಮುಖ ಮಾಡಿದ್ದರು. ಆದರೆ ಕೃಷಿಗೆ ಮಾಡಿರುವ ಸಾಲ ತೀರಿಸಲಾಗದೆ ಭವಿಷ್ಯದ ಬದುಕಿನ ದಾರಿಯೂ ಸಾವಿಗೆ ಶರಣಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಳೆಗೆ ಜಿಲ್ಲೆಯಲ್ಲಿ ಮೆಣಸು, ಕಡಲೆ, ಹತ್ತಿ, ಗೋವಿನಜೋಳ ಬೆಳೆ ಹಾಳಾಗಿತ್ತು. ಅದರಲ್ಲೂ ಸಣ್ಣ ಹಿಡುವಳಿದಾರರು ಸಾಲದ ಸುಳಿಗೆ ಸಿಲುಕಿ ಪರದಾಡುತ್ತಿದ್ದಾರೆ. ಅಕಾಲಿಕ ವರ್ಷಧಾರೆಯಿಂದ 1,17,389 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ, 14,67,880 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. 49,601 ಹೆಕ್ಟೇರ್ ಹತ್ತಿ, 16,251 ಹೆಕ್ಟೇರ್ ಜೋಳ, 9,347 ಹೆಕ್ಟೇರ್ ಭತ್ತ, 11,960 ಹೆಕ್ಟೇರ್ ಮೆಣಸಿನಕಾಯಿ, 2,300 ಹೆಕ್ಟೇರ್ ಈರುಳ್ಳಿ ಕೂಡ ನಾಶವಾಗಿದೆ.
ಧಾರವಾಡದಲ್ಲಿ 3, ಹುಬ್ಬಳ್ಳಿಯಲ್ಲಿ 1, ಕುಂದಗೋಳದಲ್ಲಿ 1, ನವಲಗುಂದದಲ್ಲಿ 6, ಅಣ್ಣಿಗೇರಿ ತಾಲೂಕಿನಲ್ಲಿ ಮೂವರು ಸೇರಿದಂತೆ ಇದುವರೆಗೆ 14 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ನಾನು ಜನರಿಗೋಸ್ಕರ ಕೆಲಸ ಮಾಡುತ್ತೇನೆ, ಕ್ರೆಡಿಟ್ಗಾಗಿ ಅಲ್ಲ: ಸಂಸದೆ ಸುಮಲತಾ ಅಂಬರೀಶ್