ಧಾರವಾಡ: ಹುಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಚುರುಕುಗೊಳಿಸಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಸಿಬಿಐನಿಂದ ಹಲವರ ವಿಚಾರಣೆ ಮಾಡಲಾಗುತ್ತಿದೆ.
ಆರೋಪಿ ಬಸವರಾಜ ಮುತ್ತಗಿ ಕಾರು ಚಾಲಕನಾಗಿದ್ದ ಸಂತೋಷನನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದಾರೆ. ಸಂತೋಷ್ನನ್ನು ಈ ಹಿಂದೆ ಸಿಬಿಐ ಪೊಲೀಸರು ಬಂಧಿಸಿದ್ದರು.
ಸಿಬಿಐ ತನಿಖೆಯಲ್ಲಿ ಸಂತೋಷ್ ಮೊದಲು ಬಂಧನಕ್ಕೊಳಗಾಗಿದ್ದ. ತಡೆಯಾಜ್ಞೆ ಬಂದ ಹಿನ್ನೆಲೆ ಸಂತೋಷನನ್ನು ಸಿಬಿಐ ಅಧಿಕಾರಿಗಳು ಕೈಬಿಟ್ಟಿದ್ದರು. ಈಗ ತನಿಖೆ ಪುನರ್ ಆರಂಭವಾದ ಹಿನ್ನೆಲೆ ಸಂತೋಷನನ್ನು ಸಿಬಿಐ ಅಧಿಕಾರಿಗಳು ಕರೆಸಿದ್ದಾರೆ.
ಧಾರವಾಡ ಉಪನಗರ ಠಾಣೆಯಲ್ಲಿ ವಿಚಾರಣೆ ನಡೆದಿದ್ದು, ಸಿಬಿಐ ಹಿರಿಯ ಅಧಿಕಾರಿಗಳು ಸಂತೋಷ್ಗೆ ಡ್ರಿಲ್ ನಡೆಸುತ್ತಿದ್ದಾರೆ. ವಿಚಾರಣೆ ನಡೆದಿರುವ ಹಿನ್ನೆಲೆ ಉಪನಗರ ಠಾಣೆಗೆ ಭಾರೀ ಬಂದೋಬಸ್ತ್ ಒದಗಿಸಲಾಗಿದೆ.
ಹಂತಕರ ಆರೋಗ್ಯ ತಪಾಸಣೆ:
ಆರೋಪಿಗಳ ಆರೋಗ್ಯ ವಿಚಾರಣೆ ನಡೆಸಲು ವೈದ್ಯರನ್ನು ಉಪನಗರ ಠಾಣೆಗೆ ಸಿಬಿಐ ಅಧಿಕಾರಿಗಳು ಕರೆತಂದಿದ್ದಾರೆ.