ಹುಬ್ಬಳ್ಳಿ: ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ ಗ್ರೋ ಗ್ರೀನ್ ಪೆಡ್ಲರ್ಸ್ ಸಂಸ್ಥೆ ವಿಶ್ವ ಪರಿಸರ ದಿನವನ್ನು ವಿನೂತನವಾಗಿ, ಅರ್ಥಪೂರ್ಣವಾಗಿ ಆಚರಿಸಿತು.
ಗ್ರೋ ಗ್ರೀನ್ ಪೆಡ್ಲರ್ಸ್ ಸಂಸ್ಥೆ ವತಿಯಿಂದ ವಿದ್ಯಾನಗರದ ಆರ್ಟ್ಸ್ ಕಾಲೇಜಿನ ಎದುರು ಹಾಗೂ ಶಿರೂರು ಪಾರ್ಕ್ ವೃತ್ತದ ಆಟೋ ಚಾಲಕರು, ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರಿಗೆ 150 ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಿ, ವಿಶ್ವ ಪರಿಸರ ದಿನಾಚರಣೆ ಶುಭ ಕೋರಲಾಯಿತು.
ಈ ವೇಳೆ ಗ್ರೋ ಗ್ರೀನ್ ಸಂಸ್ಥೆಯ ಅಧ್ಯಕ್ಷ ಬಾಲಚಂದ್ರ ಡಂಗನವರ್, ಚಂದ್ರಶೇಖರ ಏರಿಮನಜ, ಸುರೇಶ ಚಿಂದಿ, ರಾಜು ರಾಜೋಳಿ, ಚೆನ್ನು ದೇವಕ್ಕಿ, ಪ್ರವೀಣ ಪಾಟೀಲ್, ಗುಳೇಸ ಅರಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.