ಹುಬ್ಬಳ್ಳಿ : ಮುದ್ದಿನ ಮಗಳು ಮನೆ ಬಿಟ್ಟು ಹೋದಳೆಂದು ಮನನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದಲ್ಲಿ ನಡೆದಿದೆ.
ರೇಣುಕಾ ಅಸೂದೆ ನೇಣಿಗೆ ಶರಣಾದ ಮಹಿಳೆ. ಈಕೆಯ ಪುತ್ರಿ ಕಳೆದ 8 ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಮನನೊಂದು ರೇಣುಕಾ ಮನೆಯ ಕಬ್ಬಿಣದ ಸರಳುಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಓದಿ : ಅನೈತಿಕ ಸಂಬಂಧ ಪ್ರಶ್ನಿಸಿದ ಪತಿಯನ್ನೇ ಕೊಂದ ಪತ್ನಿ ಸೇರಿ ಐವರ ಬಂಧನ
ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.