ETV Bharat / state

ಸಮಗ್ರ ಕೃಷಿಯಲ್ಲಿ ಮಿಂಚಿದ ಧಾರವಾಡದ ಮಹಿಳೆ... ರೈತರಿಗೆ ಮಾದರಿಯಾದ ನಾರಿ ಪಥ - ಸಮಗ್ರ ಕೃಷಿಯಲ್ಲಿ ಮಿಂಚಿದ ಧಾರವಾಡ ಮಹಿಳೆ

ಶಿಂಗನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿದ ಪಾರ್ವತಿ ಎಂಬುವರು ಮೊದಲ ಮೊದಲು ಸಣ್ಣಪುಟ್ಟ ಕೃಷಿ ಮಾಡಿಕೊಂಡಿದ್ದರು. ನಂತರ ರೇಶ್ಮೆ, ಮೀನುಗಾರಿಕೆ, ಶುಂಠಿ ಬೆಳೆಗಳತ್ತ ಆಸಕ್ತಿ ತೋರಿ ಅವುಗಳನ್ನು ಬೆಳೆಯಲು ಪ್ರಾರಂಭಿಸಿದ ಬಳಿಕ ಇದೀಗ ಯಶಸ್ವಿಯಾಗಿದ್ದಾರೆ.

Parwathi
ರೈತ ಮಹಿಳೆ
author img

By

Published : Mar 6, 2021, 2:13 PM IST

ಧಾರವಾಡ: ಮಹಿಳೆಯರು ಕಾಲಿಡದ ಕ್ಷೇತ್ರವಿಲ್ಲ, ಅವರು ಕಾಲಿಟ್ಟ ಮೇಲೆ ಅಲ್ಲಿ ಒಂದು ಸಾಧನೆ ಮಾಡುವ ಹಂಬಲ ಹೊಂದಿರುತ್ತಾರೆ. ಹಲವಾರು ಕ್ಷೇತ್ರಗಳಲ್ಲಿ ಇಂದು ಮಹಿಳೆಯರು ಮಿಂಚು‌ತ್ತಿದ್ದಾರೆ. ಅದಕ್ಕೆ ಕೃಷಿ ಕ್ಷೇತ್ರ ಕೂಡಾ ಹೊರತಾಗಿಲ್ಲ. ಅದರಲ್ಲೂ ಸಮಗ್ರ ಕೃಷಿ ಮಾಡಿಕೊಂಡ ಮಹಿಳೆಯೋರ್ವರು ಸ್ವತಃ ಜಮೀನಿನಲ್ಲಿ ತಾವೇ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಹೌದು, ಜಮೀನಿನಲ್ಲಿ ಕೃಷಿ ಕೆಲಸ ಮಾಡುವ ಮಹಿಳೆಯ ಹೆಸರು ಪಾರ್ವತಿ‌ ಮಹಾದೇವ ದಂಡಿನ. ಇವರು ಮೂಲತಃ ಕೃಷಿ ಕುಟುಂಬದವರು. ಧಾರವಾಡ ತಾಲೂಕಿನ ಶಿಂಗನಹಳ್ಳಿ ಗ್ರಾಮದವರಾದ ಪಾರ್ವತಿ ಅವರಿಗೆ ಕೃಷಿ ಅಂದ್ರೆ ಅಚ್ಚುಮೆಚ್ಚು. ಪತಿಗೆ ಸಹಾಯಕಿಯಾಗಿ ಜಮೀನು ಸೇರಿಕೊಂಡಿದ್ದ ಇವರು ಇದೀಗ ಇಡೀ ಕೃಷಿಯನ್ನು ನೋಡಿಕೊಂಡು ಅದರಿಂದ ಹೆಸರು ಮಾಡಿ ಎಪಿಎಂಸಿ‌ ಸದಸ್ಯೆ ಕೂಡಾ ಆಗಿದ್ದಾರೆ.

ಕೃಷಿಯಲ್ಲಿ ಖುಷಿ ಕಂಡ ಮಹಿಳೆ

ಜಮೀನಿನಲ್ಲಿ ಸಲಕಿ‌ ಗುದ್ದಲಿ ಹಿಡಿದುಕೊಂಡು ನೀರು ಹರಿಸುತ್ತಾರೆ. ಬೆನ್ನಿಗೆ ಕೀಟನಾಶಕದ ಟ್ಯಾಂಕ್ ಕಟ್ಟಿಕೊಂಡು ಬೆಳೆಗಳಿಗೆ ಕೀಟನಾಶಕ ಸಿಂಪರಣೆ ಮಾಡುತ್ತಾರೆ. ಈ ರೀತಿ ಕೃಷಿ ಮಾಡುವ ಪಾರ್ವತಿ ಸುತ್ತಮುತ್ತಲಿನ ಗ್ರಾಮದ ಜನರಿಗೆ ಮಾದರಿಯಾಗಿದ್ದಾರೆ.

ಶಿಂಗನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿದ ಪಾರ್ವತಿ ಮೊದಲ ಮೊದಲು ಸಣ್ಣಪುಟ್ಟ ಕೃಷಿ ಮಾಡಿಕೊಂಡಿದ್ದರು. ಆಮೇಲೆ ಆಮೇಲೆ ರೇಶ್ಮೆ, ಮೀನುಗಾರಿಕೆ, ಶುಂಠಿ ಬೆಳೆಗಳತ್ತ ಆಸಕ್ತಿ ತೋರಿ ಅವುಗಳನ್ನು ಬೆಳೆಯಲು ಪ್ರಾರಂಭಿಸಿದ ಬಳಿಕ ಇದೀಗ ಯಶಸ್ವಿಯಾಗಿದ್ದಾರೆ.

ಇವರು ಮನೆಗೆ ಸೊಸೆಯಾಗಿ ಬಂದ ಬಳಿಕ ಮನೆಯ ಚಿತ್ರಣವಷ್ಟೇ ಅಲ್ಲದೇ ಜಮೀನುಗಳ ಚಿತ್ರಣಗಳನ್ನು ಬದಲಿಸಿದ್ದಾರಂತೆ. ಕಳೆದ 12 ವರ್ಷಗಳಿಂದ ಕೃಷಿ ಮಾಡುತ್ತಿರುವ ಪಾರ್ವತಿಯವರ ಸಾಧನೆಗೆ ಅನೇಕ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.

12 ಎಕರೆಗಿಂತ ಅಧಿಕ ಜಮೀನು ಹೊಂದಿರುವ ಇವರು ಮತ್ತೆ ಬೇರೆ ಬೇರೆ ಕಡೆಗಳಲ್ಲಿ ಜಮೀನು ಪಡೆದುಕೊಂಡು ಕೃಷಿ ಮಾಡುತ್ತಾರೆ. ಇವರು ಯಾರು ಮಾರ್ಗದರ್ಶನ ಪಡೆಯದೇ ಕೃಷಿ ಅಂಕಣಗಳನ್ನು ಮೊಬೈಲ್ ನಲ್ಲಿ ಓದಿಕೊಂಡು ಮಾಹಿತಿ ತಿಳಿದುಕೊಂಡು ಕೃಷಿ ಮಾಡುತ್ತಾರಂತೆ. ಸದಾ ಉತ್ತಮ ಆದಾಯ ಗಳಿಸಬಲ್ಲ ಕೃಷಿ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡುತ್ತಾರೆ.

ಕೃಷಿಯಷ್ಟೇ ಅಲ್ಲದೇ ಹೈನುಗಾರಿಕೆಯನ್ನು ಸಹ ಮಾಡುತ್ತಾರೆ. ಬೆಳಗ್ಗೆ ಜಾನುವಾರು ಕೊಠಡಿಯಿಂದ ಆರಂಭವಾಗುವ ಇವರ ಜೀವನ ಮಧ್ಯಾಹ್ನ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಮಕ್ಕಳಿಗೂ‌ ಸಹ ಕೃಷಿ ಬಗ್ಗೆ ತಿಳುವಳಿಕೆ ಹೇಳುತ್ತಾರೆ.

ಒಟ್ಟಿನಲ್ಲಿ ಪತಿಗೆ ಸಹಾಯಕಿಯಾಗಿ ಕೃಷಿ ಕಲಿತುಕೊಂಡು ಇದೀಗ ಕೃಷಿ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಲುಹೊರಟಿರುವ ಪಾರ್ವತಿ ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂಬುದು ನಮ್ಮ ಆಶಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.