ಧಾರವಾಡ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಶ್ರಯದಲ್ಲಿ ಅಮ್ಮಿನಭಾವಿಯಲ್ಲಿ ನಿರ್ಮಿಸಿರುವ 40 ಎಂಎಲ್ಡಿ ಸಾಮರ್ಥ್ಯದ ನೂತನ ಜಲಶುದ್ಧೀಕರಣ ಘಟಕವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಸಚಿವ ಜಗದೀಶ ಶೆಟ್ಟರ್ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.
ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಜಲಶುದ್ದೀಕರಣ ಘಟಕವನ್ನು ಅವರು ವೀಕ್ಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಮೊದಲು 12 ದಿನಕ್ಕೊಮ್ಮೆ ನೀರು ಬರುತ್ತಿತ್ತು. ಇನ್ನು ಮೇಲೆ ಹುಬ್ಬಳ್ಳಿ ಧಾರವಾಡಕ್ಕೆ 3 ದಿನಕ್ಕೊಮ್ಮೆ ನೀರು ಬರುತ್ತದೆ ಎಂದು ಭರವಸೆ ನೀಡಿದರು.
ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಜಲಮಂಡಳಿ ಇಲಾಖೆಯಿಂದ 26 ಕೋಟಿ ಅನುದಾನದಲ್ಲಿ ಹೊಸ ಜಾಕವೆಲ್ ಉದ್ಘಾಟನೆ ಮಾಡಲಾಗಿದೆ. 40 ಎಂಎಲ್ಡಿ ಹೆಚ್ಚುವರಿ ನೀರು ಅವಳಿ ನಗರಕ್ಕೆ ಇನ್ನುಮುಂದೆ ಬರುತ್ತದೆ. 24/7 ಕುಡಿಯುವ ನೀರಿನ ಯೋಜನೆ ಅಂದಾಜು 700 ಕೋಟಿಯದ್ದಾಗಿದೆ. 2ನೇ ಹಂತದ ಟೆಂಡರ್ ಆದ ನಂತರ ವಿಶ್ವ ಬ್ಯಾಂಕ್ ಒಪ್ಪಿಗೆ ಆದ ಬಳಿಕ ಅದು ಕೂಡ ಸಾಧ್ಯವಾಗುತ್ತೆ ಎಂದು ಭರವಸೆ ನೀಡಿದರು.