ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಈ ನೇಮಕಾತಿ ನಡೆಯಲಿದೆ.
ಹುದ್ದೆಗಳ ವಿವರ: ಸ್ತ್ರಿರೋಗ ತಜ್ಞರು, ಅರಿವಳಿಕೆ ತಜ್ಞರು, ಸಾಮಾನ್ಯ ಕರ್ತವ್ಯ ವೈದ್ಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಭೌತಿಕ ಚಿಕಿತ್ಸಕ, ಓಟಿ ತಂತ್ರಜ್ಞರು, ಸಿಎಸ್ಎಸ್ಡಿ, ಹೌಸ್ಕೀಪರ್ ಮ್ಯಾನೇಜರ್, ವೈದ್ಯಕೀಯ ದಾಖಲೆ ಅಧಿಕಾರಿ, ಎಲ್ಡಿಸಿ, ಡ್ರೆಸ್ಸರ್, ವಾರ್ಡ್ ಬಾಯ್, ಆಯಾ, ಆಂಬ್ಯುಲೆನ್ಸ್ ವಾಹನ ಚಾಲಕರು.
ವಿದ್ಯಾರ್ಹತೆ:
- ಸ್ತ್ರಿರೋಗ ತಜ್ಞರು- ಎಂಬಿ, ಡಿಎನ್ಬಿ, ಡಿಜಿಒ
- ಅರಿವಳಿಕೆ ತಜ್ಞರು- ಎಂಡಿ
- ಸಾಮಾನ್ಯ ಕರ್ತವ್ಯ ವೈದ್ಯರು- ಎಂಬಿಬಿಎಸ್
- ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು- ಎಎನ್ಎಂ
- ಭೌತಿಕ ಚಿಕಿತ್ಸಕ- ಬುಪಿಟಿ/ಡಿಪಿಟಿ
- ಓಟಿ ತಂತ್ರಜ್ಞರು- ಒಟಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ
- ಸಿಎಸ್ಎಸ್ಡಿ- ಸಿಎಸ್ಎಸ್ಡಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ
- ಹೌಸ್ಕೀಪರ್ ಮ್ಯಾನೇಜರ್- ಡಿಪ್ಲೊಮಾ ಇನ್ ಹಾಸ್ಪಿಟಲ್ ಮ್ಯಾನೇಜ್ಮೆಂಟ್
- ವೈದ್ಯಕೀಯ ದಾಖಲೆ ಅಧಿಕಾರಿ- ವೈದ್ಯಕೀಯ ದಾಖಲೆ ತಂತ್ರಜ್ಞಾನ ಹಾಗೂ 5 ವರ್ಷದ ಅನುಭವ
- ಎಲ್ಡಿಸಿ- ಯಾವುದೇ ಪದವಿ, ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್, ಟ್ಯಾಲಿ, ಎಂಎಸ್ ಆಫೀಸ್ ಅನುಭವ
- ಡ್ರೆಸ್ಸರ್, ವಾರ್ಡ್ ಬಾಯ್, ಆಯಾ- ಕನಿಷ್ಠ 8ನೇ ತರಗತಿ ಪಾಸ್
- ಆಂಬ್ಯುಲೆನ್ಸ್ ವಾಹನ ಚಾಲಕರು- 10ನೇ ತರಗತಿ, ಭಾರಿ ವಾಹನ ಚಾಲನ ಪರವಾನಗಿ, ಪ್ರಥಮ ಚಿಕಿತ್ಸಾ ಕೋರ್ಸ್ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ: ನೇರ ನೇಮಕಾತಿ
ಅರ್ಜಿ ಸಲ್ಲಿಕೆ: ಆಸಕ್ತ ಅಭ್ಯರ್ಥಿಗಳು ತಮ್ಮ ಪರಿಷ್ಕೃತ ಬಯೋ ಡೇಟಾವನ್ನು ನವೆಂಬರ್ 18ರೊಳಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
ಮುಖ್ಯ ವೈದ್ಯಕೀಯ ಅಧಿಕಾರಿಗಳ ಕಚೇರಿ, ಚಿತಗುಪ್ಪಿ ಆಸ್ಪತ್ರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಹುಬ್ಬಳ್ಳಿ.
ವಾಕ್ ಇನ್ ಇಂಟರ್ವ್ಯೂ ನಡೆಯುವ ದಿನಾಂಕ: ನವೆಂಬರ್ 22 ಮತ್ತು 23.
ಈ ಕುರಿತು ಸಂಪೂರ್ಣ ಮಾಹಿತಿಗೆ ಅಭ್ಯರ್ಥಿಗಳು hdmc.mrc.gov.in ಇಲ್ಲಿಗೆ ಭೇಟಿ ನೀಡಿ.
ಇದನ್ನೂ ಓದಿ: ನಿಮ್ಹಾನ್ಸ್ನಲ್ಲಿ ನೇಮಕಾತಿ: 32 ನರ್ಸಿಂಗ್ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ