ಧಾರವಾಡ: ಪಕ್ಷವೊಂದರ ಬ್ಲಾಕ್ ಮಟ್ಟದ ಮುಖಂಡರು, ಕಾರ್ಯಕರ್ತರು ಇರುವ ವಾಟ್ಸ್ಆ್ಯಪ್ ಗ್ರೂಪ್ ನಲ್ಲಿ ಮಹಿಳೆಯ ಅಶ್ಲೀಲ ಫೋಟೋಗಳನ್ನ ಶೇರ್ ಮಾಡಿದ ಘಟನೆ ಧಾರವಾಡ ಜಿಲ್ಲೆಯ ತಾಲೂಕೊಂದರಲ್ಲಿ ನಡೆದಿದೆ.
ಗ್ರೂಪ್ ನಲ್ಲಿದ್ದ ಮುಖಂಡನೊಬ್ಬ ಈ ಚಿತ್ರಗಳನ್ನು ಶೇರ್ ಮಾಡಿದ್ದಾನೆ. ಮಹಿಳೆಯೊಬ್ಬಳ ಜೊತೆ ವಿಡಿಯೋ ಕಾಲ್ ನಲ್ಲಿದ್ದ ವೇಳೆ ಅಶ್ಲೀಲವಾಗಿ ನಡೆದುಕೊಂಡು ಮತ್ತು ಅದರ ಚಿತ್ರವನ್ನು ಸೆರೆ ಹಿಡಿದು ಗ್ರೂಪ್ನಲ್ಲಿ ಶೇರ್ ಮಾಡಿದ್ದ. ವಿಡಿಯೋ ಕಾಲ್ ನಲ್ಲಿ ಮಹಿಳೆಯ ಅರೆನಗ್ನ ಸ್ಕ್ರೀನ್ ಶಾಟ್ ತೆಗೆದು ಇಂತಹ ಕೃತ್ಯ ಎಸೆಗಿದ್ದಾನೆ.
ಇದು ಗ್ರೂಪ್ನಲ್ಲಿ ಇರುವ ಇತರ ಸದಸ್ಯರಿಗೆ ಇರಿಸು ಮುರಿಸು ತಂದಿದೆ. ಇನ್ನು ಪಕ್ಷದ ಸದಸ್ಯರ ಆಕ್ರೋಶಕ್ಕೂ ಕಾರಣವಾಗಿದೆ. ಗ್ರೂಪ್ ನಲ್ಲಿ ಇರುವ ಎಲ್ಲರೂ ಆತನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಮುಖಂಡ ಶೇರ್ ಮಾಡಿದ್ದ ಗ್ರೂಪ್ನಿಂದ ಎಲ್ಲ ಸದಸ್ಯರು ಹೊರ ಬಂದಿದ್ದು, ಆ ಗ್ರೂಪ್ ಅನ್ನೇ ಡಿಲಿಟ್ ಮಾಡಿರುವುದಾಗಿ ತಿಳಿದು ಬಂದಿದೆ. ಇನ್ನು ಆತ ಶೇರ್ ಮಾಡಿದ ಫೋಟೋಗಳು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಗೆ ಗ್ರಾಸವಾಗಿದೆ.