ETV Bharat / state

ಅನರ್ಹರ ಬಗ್ಗೆ ಕನಿಕರ, ಬಿಜೆಪಿಗರ ಬಗ್ಗೆ ಬೇಸರ: ಬಿಎಸ್​ವೈ ಮಾತನಾಡಿರುವ ವಿಡಿಯೋ ವೈರಲ್​ - ಅನರ್ಹ ಶಾಸಕರ ಕ್ಷೇತ್ರದ ಉಪ ಚುನಾವಣೆ

ಉಪ ಚುನಾವಣೆ ಏನಾಗುತ್ತೋ ಗೊತ್ತಿಲ್ಲ. ಅವರು ನಮ್ಮನ್ನ ಆಡಳಿತಕ್ಕೆ ತಂದಿದ್ದಾರೆ. ಅವರ ಪರವಾಗಿ ನಾವು ಗಟ್ಟಿಯಾಗಿ ನಿಲ್ಲಬೇಕು ಎಂದ ಅವರು, ನನಗೇನು ಮುಖ್ಯಮಂತ್ರಿಗಿರಿ ಬೇಕಾಗಿಲ್ಲ. ಒಳ್ಳೆ ಉದ್ದೇಶಕ್ಕೆ ಬೆಲೆಯೇ ಇಲ್ಲ. ವಾಸ್ತವ ಸ್ಥಿತಿ ತಿಳಿಯದೇ ನೀವು ಮಾತನಾಡಿದ್ದೀರಿ. ಈ ಎಲ್ಲಾ ಸಂಗತಿಗಳನ್ನ ಕೇಂದ್ರ ನಾಯಕರ ಗಮನಕ್ಕೆ ತರೋಣ. ನಾನಂತೂ ಯಾವ ತೀರ್ಮಾನ ತೆಗೆದುಕೊಳ್ಳೋ ಸ್ಥಿತಿಯಲ್ಲಿಲ್ಲ. ನಾನೇ ಅಪರಾಧ ಮಾಡಿದಂತೆ ಕಾಣುತ್ತೆ ಎಂದರು.

ಅನರ್ಹರ ಬಗ್ಗೆ ಕನಿಕರ, ಬಿಜೆಪಿಗರ ಬಗ್ಗೆ ಬೇಸರ
author img

By

Published : Nov 1, 2019, 6:26 PM IST

Updated : Nov 1, 2019, 7:19 PM IST

ಹುಬ್ಬಳ್ಳಿ: ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಅನರ್ಹ ಶಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ‌ ನಾಯಕರ ನಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ಬೇಸರ ವ್ಯಕ್ತಪಡಿಸಿರುವ ವಿಡಿಯೋ ಈಗ ವೈರಲ್ ಆಗಿದೆ.

ಸಭೆಯಲ್ಲಿ ಅನರ್ಹ ಶಾಸಕರ ಕ್ಷೇತ್ರದ ಉಪ ಚುನಾವಣೆ ಬಗೆಗಿನ ಚರ್ಚೆಯ ಸಂದರ್ಭದಲ್ಲಿ ಬೇಸರ ಹೊರಹಾಕಿದ್ದಾರೆ. ಅನರ್ಹ ಶಾಸಕರ ವಿರುದ್ಧ ಪಕ್ಷದ ಕೆಲ ನಾಯಕರು ಮಾತನಾಡಿದಕ್ಕೆ ಕ್ಲಾಸ್ ತಗೆದುಕೊಂಡಿದ್ದಾರೆ. ಸರ್ಕಾರ ಉಳಿಸುವ ಧಾಟಿಯಲ್ಲಿ ಯಾರೂ ಮಾತನಾಡಿಲ್ಲ. 17 ಅನರ್ಹರ ಬಗ್ಗೆ ಯಡಿಯೂರಪ್ಪ ತೀರ್ಮಾನ ತೆಗೆದುಕೊಂಡಿಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಬಾಂಬೆಯಲ್ಲಿ ಎರಡೂವರೆ ತಿಂಗಳು ಇಟ್ಟಿದ್ರು. ಇದೆಲ್ಲ ನಿಮಗೆ ಗೊತ್ತಿದೆ ತಾನೇ? ಎಂದು ಗುಡುಗಿದ್ದಾರೆ.

ಉಪ ಚುನಾವಣೆ ಏನಾಗುತ್ತೊ ಗೊತ್ತಿಲ್ಲ. ಅವರು ನಮ್ಮನ್ನ ಆಡಳಿತಕ್ಕೆ ತಂದಿದ್ದಾರೆ. ಅವರ ಪರವಾಗಿ ನಾವು ಗಟ್ಟಿಯಾಗಿ ನಿಲ್ಲಬೇಕು ಎಂದ ಅವರು, ನನಗೇನು ಮುಖ್ಯಮಂತ್ರಿಗಿರಿ ಬೇಕಾಗಿಲ್ಲ. ಒಳ್ಳೆಯ ಉದ್ದೇಶಕ್ಕೆ ಬೆಲೆಯೇ ಇಲ್ಲ. ವಾಸ್ತವ ಸ್ಥಿತಿ ತಿಳಿಯದೇ ನೀವು ಮಾತನಾಡಿದ್ದೀರಿ. ಈ ಎಲ್ಲ ಸಂಗತಿಗಳನ್ನ ಕೇಂದ್ರ ನಾಯಕರ ಗಮನಕ್ಕೆ ತರೋಣ. ನಾನಂತೂ ಯಾವ ತೀರ್ಮಾನ ತೆಗೆದುಕೊಳ್ಳೋ ಸ್ಥಿತಿಯಲ್ಲಿಲ್ಲ. ನಾನೇ ಅಪರಾಧ ಮಾಡಿದಂತೆ ಕಾಣುತ್ತೆ ಎಂದರು.

ಬಿಎಸ್​ವೈ ಮಾತನಾಡಿರುವ ವಿಡಿಯೋ ವೈರಲ್​

ಅನರ್ಹರನ್ನು ನಂಬಿಸಿ ನಾನು ತಪ್ಪು ಮಾಡಿದ್ದೇನೆ. ಈ ಸಭೆಗೆ ನಾನು ಬರಬಾರದಿತ್ತು. ಅನರ್ಹರ ತ್ಯಾಗ ಯಾರ ಗಮನಕ್ಕೂ ಬರಲೇ ಇಲ್ಲ. ಅವರ ತ್ಯಾಗದ ಫಲವಾಗಿಯೇ ಇಂದು ನಾವು ಅಧಿಕಾರದಲ್ಲಿದ್ದೇವೆ. ನಮ್ಮನ್ನ ನಂಬಿ ಅನರ್ಹರು ಮೂರ್ಖರು, ಹುಚ್ಚರಾಗಿದ್ದಾರೆ. ಅವರು ರಾಜೀನಾಮೆ ಕೊಡೋ ಅಗತ್ಯವಾದ್ರೂ ಏನಿತ್ತು? ನಮ್ಮನ್ನ ನಂಬಿ ಅವರು ರಾಜೀನಾಮೆ ನೀಡಿದ್ದಾರೆ ಎಂದ ಅವರು, ಕೈ ಮುಗಿವೆ, ಈ ಸಂಗತಿ ಹೊರಗೆ ಹೋಗೋದು ಬೇಡ ಎಂದಿದ್ದಾರೆ. ಆದರೂ ಕೂಡ ಬಿಎಸ್​ವೈ ಬೇಸರ ವ್ಯಕ್ತಪಡಿಸಿರುವ ವಿಡಿಯೋ ಈಗ ವೈರಲ್​ ಆಗಿದ್ದು, ಸಿಎಂ ಅಸಹಾಯಕತೆಯನ್ನು ಎತ್ತಿ ತೋರಿಸುತ್ತಿದೆ.

Intro:ಹುಬ್ಬಳ್ಳಿ-03
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ಕೋರಕಮೀಟಿ ಸಭೆಯಲ್ಲಿ ಅನರ್ಹ ಶಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ‌ ನಾಯಕರ ನಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ಬೇಸರ ಹೊರ ಹಾಕಿರುವ ವಿಡಿಯೋ ಈಗ ವೈರಲ್ ಆಗಿದೆ.
ಸಭೆಯಲ್ಲಿ ಅನರ್ಹ ಶಾಸಕರ ಕ್ಷೇತ್ರದ ಉಪ ಚುನಾವಣೆ ಬಗ್ಗೆ ಚರ್ಚೆಯ ಸಂದರ್ಭದಲ್ಲಿ ಅತೀವ ಬೇಸರ ಹೊರಹಾಕಿದ್ದಾರೆ.
ಅನರ್ಹ ಶಾಸಕರ ವಿರುದ್ದ ಬಗ್ಗೆ ಪಕ್ಷದ ಕೆಲ ನಾಯಕರು ಮಾತನಾಡಿದಕ್ಕೆ
ಬಿಜೆಪಿ ನಾಯಕರಿಗೆ ಕ್ಲಾಸ್ ತಗೆದುಕೊಂಡಿದ್ದಾರೆ.
ಸರ್ಕಾರ ಉಳಿಸುವ ಧಾಟಿಯಲ್ಲಿ ಯಾರೂ ಮಾತಾಡಿಲ್ಲ.
17ಅನರ್ಹರ ಬಗ್ಗೆ ಯಡಿಯೂರಪ್ಪ ತೀರ್ಮಾನ ತೆಗೆದುಕೊಂಡಿಲ್ಲ.
ರಾಷ್ಟ್ರೀಯ ಅಧ್ಯಕ್ಷರೇ ಬಾಂಬೆಯಲ್ಲಿ ಎರುವರೆ ತಿಂಗಳು ಇಟ್ಟಿದ್ರು. ಇದೆಲ್ಲ ನಿಮಗೆ ಗೊತ್ತಿದೆತಾನೆ ಎಂದು ಗುಡುಗಿದ್ದಾರೆ.
ಎರಡೂವರೆ ಮೂರು ತಿಂಗಳು ಅವರ ಕ್ಷೇತ್ರಕ್ಕೆ ಹೋಗಿಲ್ಲ. ಹೆಂಡರು, ಮಕ್ಕಳ ಮುಖ ನೋಡಿಲ್ಲ. ಉಪ ಚುನಾವಣೆ ಏನಾಗುತ್ತೊ ಗೊತ್ತಿಲ್ಲ. ಅವರು ನಮ್ಮನ್ನ ಆಡಳಿತಕ್ಕೆ ತಂದಿದ್ದಾರೆ.
ಅವರ ಪರವಾಗಿ ನಾವು ಗಟ್ಟಿಯಾಗಿ ನಿಲ್ಲಬೇಕು.
ಈ ಮಾತು ನಿಮ್ಮ ಬಾಯಲ್ಲಿ ಬರಲಿಲ್ಲ. ನೀವು ಅವರ ಜಾಗದಲ್ಲಿದಿದ್ರೆ ಏನು ಮಾಡ್ತಿದ್ರಿ? ಇವತ್ತು ನೀವು ಮಾತಾಡಿದ್ದು ನಾಲ್ಕು ಗೋಡೆಗಳ ಮಧ್ಯೆಯೇ ಇರಲಿ.
ಲಕ್ಷ್ಮಣ ಸವದಿ ಕೇವಲ 30ಸಾವಿರ ಮತದಿಂದ ಸೋತಿದ್ದಾರೆ. ಈಗ ರಾಜು ಕಾಗೆ ಹೆಸರನ್ನೇ ಹೇಳುತ್ತೀರಿ.
ಇದು ಎಷ್ಟರ ಮಟ್ಟಿಗೆ ಸರಿ.
ಇದನ್ನ ನಾನು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ನನಗೇನು ಮುಖ್ಯಮಂತ್ರಿಗಿರಿ ಬೇಕಾಗಿಲ್ಲ.
ಒಳ್ಳೆ ಉದ್ದೇಶಕ್ಕೆ ಬೆಲೆಯೇ ಇಲ್ಲ.
ವಾಸ್ತವ ಸ್ಥಿತಿ ತಿಳಿಯದೇ ನೀವು ಮಾತನಾಡಿದ್ದೀರಿ. ಈ ಎಲ್ಲ ಸಂಗತಿಗಳನ್ನ ಕೇಂದ್ರ ನಾಯಕರ ಗಮನಕ್ಕೆ ತರೋಣ.
ಬಾನಂತೂ ಯಾವ ತೀರ್ಮಾನ ತೆಗೆದುಕೊಳ್ಳೋ ಸ್ಥಿತಿಯಲ್ಲಿಲ್ಲ.
ನಾನೇ ಅಪರಾಧ ಮಾಡಿದಂತೆ ಕಾಣುತ್ತೆ. ಅನರ್ಹರನ್ನ ನಂಬಿಸಿ ನಾನು ತಪ್ಪು ಮಾಡಿದ್ದೇನೆ.
ಐ ನೆವರ್ ಎಕ್ಸಪೆಕ್ಟೆಡ್.
ಈ ಸಭೆಗೆ ನಾನು ಬರಬಾರದಿತ್ತು. ಅನರ್ಹರ ತ್ಯಾಗ ಯಾರಗಮನಕ್ಕೂ ಬರಲೇ ಇಲ್ಲ. ಅವರ ತ್ಯಾಗದ ಫಲವಾಗಿಯೇ ಇಂದು ನಾವು ಅಧಿಕಾರದಲ್ಲಿದ್ದೇವೆ.
ನಮ್ಮನ್ನ ನಂಬಿ ಅನರ್ಹರು ಮೂರ್ಖರು, ಹುಚ್ಚರಾಗಿದ್ದಾರೆ.
ಅವರು ರಾಜೀನಾಮೆ ಕೊಡೋ ಅಗತ್ಯವಾದ್ರೂ ಏನಿತ್ತು.
ನಮ್ಮನ್ನ ನಂಬಿ ಅವರು ರಾಜೀನಾಮೆ ನೀಡಿದ್ದಾರೆ.
ಸುಪ್ರಿಂ ನಿಂದ ನಾಳೆ ನಾಡಿದ್ದು ತೀರ್ಪು ಬರುತ್ತೆ. ಶೇ.90ರಷ್ಟು ಅನರ್ಹರು ಚುನಾವಣೆಗೆ ನಿಲ್ತಾರೆ. ನನಗೆ ತುಂಬ ನೋವಾಗಿದೆ. ಹಿರಿಯ, ಕಿರಿಯ ನಾಯಕರಿಂದ ನೋವಾಗಿದೆ.
ಕೈ ಮುಗಿವೆ ಈ ಸಂಗತಿ ಹೊರಗೆ ಹೋಗೋದು ಬೇಡ ಎಂದು ಮಾತನಾಡಿರುವ ವಿಡಿಯೋ‌ ಈಗ ವೈರಲ್ ಆಗಿದ್ದು, ಯಡಿಯೂರಪ್ಪನವರ ಅಸಾಯಕತೆಯನ್ನು ಎತ್ತಿ ತೋರಿಸುತ್ತಿದೆ. Body:H B GaddadConclusion:Etv hubli
Last Updated : Nov 1, 2019, 7:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.