ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕ್ರೀಡಾಂಗಣ ನಿರ್ಮಾಣದಲ್ಲಿ ಗುತ್ತಿಗೆ ಕಂಪನಿಯೊಂದಿಗಿನ ಒಪ್ಪಂದ ಉಲ್ಲಂಘನೆಯಾದ ಕಾರಣ ಕವಿವಿ 2.27 ಕೋಟಿ ರೂ. ಹಣ ಪಾವತಿಸುವಂತೆ 1ನೇ ಹಿರಿಯ ದಿವಾಣಿ ನ್ಯಾಯಾಲಯ ಆದೇಶಿಸಿದೆ.
ಹುಬ್ಬಳ್ಳಿಯ ಶೆಟ್ಟಿ ಕನ್ಸ್ಟ್ರಕ್ಷನ್ಸ್ ಕಂಪನಿಯೊಂದಿಗೆ ಕವಿವಿ 1996ರಲ್ಲಿ 1.89 ಕೋಟಿ ರೂ. ಒಪ್ಪಂದ ಮಾಡಿಕೊಂಡಿತ್ತು. ಕ್ರೀಡಾಂಗಣದಲ್ಲಿ ವಿದ್ಯುತ್ ಹೈಟೆನ್ಶನ್ ವೈಯರ್ ಸ್ಥಳಾಂತರ ಮಾಡಲು ವಿವಿ ವಿಳಂಬ ಮಾಡಿತ್ತು. ಕರ್ನಾಟಕ ವಿಶ್ವ ವಿದ್ಯಾಲಯ ವಿದ್ಯುತ್ ಹೈಟೆನ್ಶನ್ ವೈಯರ್ ಸ್ಥಳಾಂತರ ಮಾಡದಿದ್ದಕ್ಕೆ ಕಂಪನಿಗೆ ನಷ್ಟ ಉಂಟಾಗಿ ವಿವಿ ವಿರುದ್ಧ ಶೆಟ್ಟಿ ಕನ್ಸ್ಟ್ರಕ್ಷನ್ಸ್ ಧಾರವಾಡ ನ್ಯಾಯಾಲಯದ ಮೊರೆ ಹೋಗಿತ್ತು.
14 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಧೀಶ ಇಂದಿರಾ ಚಟ್ಟಿಯಾರ್, 2.27 ಕೋಟಿ ರೂ. ಹಣ ಪಾವತಿಸುವಂತೆ ಆದೇಶ ಹೊರಡಿಸಿದ್ದಾರೆ.